Home ದಕ್ಷಿಣ ಕನ್ನಡ ಮಂಗಳೂರು: ಮುಸ್ಲಿಂ ವ್ಯಕ್ತಿಯೊಂದಿಗೆ ಕ್ರೈಸ್ತ ಯುವತಿಯ ಲವ್ ಜಿಹಾದ್!! ಆಕೆಗೆ ಡ್ರಗ್ಸ್ ಕೊಟ್ಟು ಗೆಳೆಯರ ಸಹಿತ...

ಮಂಗಳೂರು: ಮುಸ್ಲಿಂ ವ್ಯಕ್ತಿಯೊಂದಿಗೆ ಕ್ರೈಸ್ತ ಯುವತಿಯ ಲವ್ ಜಿಹಾದ್!! ಆಕೆಗೆ ಡ್ರಗ್ಸ್ ಕೊಟ್ಟು ಗೆಳೆಯರ ಸಹಿತ ತಾನೂ ಚಟ ತೀರಿಸಿಕೊಂಡ ಕಾಮಿ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಅನ್ಯಮತೀಯ ವ್ಯಕ್ತಿಯೊಬ್ಬ ತನ್ನ ಮಗಳನ್ನು ಲವ್ ಜಿಹಾದಿನತ್ತ ಕರೆದೊಯ್ದು, ಆಕೆಗೆ ಡ್ರಗ್ಸ್ ಚಟ ಹಿಡಿಸಿ ತನ್ನ ಚಟ ತೀರಿಸಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಕ್ರೈಸ್ತ ಸಮುದಾಯದ ಸಂತ್ರಸ್ತ ಯುವತಿಯ ರಕ್ಷಣೆಗಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮಂಗಳೂರು ಇದರ ಮೊರೆ ಹೋಗಿದ್ದಾರೆ.

ಘಟನೆ ವಿವರ: ಮಂಗಳೂರು ನಗರದ ಕೃಷ್ಣಾಪುರ ನಿವಾಸಿ ಡ್ರಗ್ ಪೆಡ್ಲರ್ ಸಿದ್ದಿಕ್ ಎಂಬಾತ ಕ್ರೈಸ್ತ ಯುವತಿಯನ್ನು ಲವ್ ಜಿಹಾದ್ ನಡೆಸಿದ್ದ. ಈತನ ಮಾತನ್ನು ನಂಬಿದ ಯುವತಿ ಡ್ರಗ್ಸ್ ಗೆ ಬಲಿಯಾಗಿದ್ದಾಳೆ.

ಹಲವಾರು ದಿನಗಳ ಕಾಲ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಸಿದ್ದಿಕ್,ಯುವತಿಯನ್ನು ಅಮಲಿನಲ್ಲಿ ತೇಲಿಸಿ ಆತ ಹಾಗೂ ಆತನ ನಾಲ್ವರು ಗೆಳೆಯರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ನೀಡಿದ್ದು, ಧರ್ಮಗುರುಗಳ ಗಮನಕ್ಕೂ ತರಲಾಗಿದೆ. ಆದರೂ ನ್ಯಾಯ ಸಿಗದಿದ್ದ ಕಾರಣ ಸದ್ಯ ಸಂತ್ರಸ್ತ ಕ್ರೈಸ್ತ ಧರ್ಮದ ಯುವತಿಯ ತಾಯಿ ವಿಹಿಂಪ ಮಂಗಳೂರು ಇದರ ಮೊರೆ ಹೋಗಿದ್ದು ಮಗಳನ್ನು ರಕ್ಷಿಸಿಕೊಡಲು ಅಂಗಲಾಚಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಉರ್ವ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಬಂಧನಕ್ಕೆ ವಿಹಿಂಪ ಒತ್ತಾಯ: ಘಟನೆಯನ್ನು ಬಗ್ಗೆ ವಿಹಿಂಪ ತೀವ್ರವಾಗಿ ಖಂಡಿಸಿದ್ದು, ಡ್ರಗ್ ಮಾಫಿಯಾದಲ್ಲಿ ಈತನ ಹೆಸರು ಹಿಂದಿನಿಂದಲೂ ಕೇಳಿಬರುತ್ತಿದೆ. ಈಗಾಗಲೇ ನಾಲ್ಕು ಮದುವೆಯಾಗಿರುವ ಮಾಹಿತಿ ಇದ್ದು,ಈತ ಈಗ ಇನ್ನೊಂದು ಧರ್ಮದ ಯುವತಿಯ ಬಾಳನ್ನು ಹಾಳುಮಾಡಲು ಪ್ರಯತ್ನಿಸಿರುವುದು ಖಂಡನೀಯ. ಈತನ ವಿರುದ್ಧ ಈ ಮೊದಲು ಕೆಲ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಮಂಗಳೂರು ಕಮಿಷನರ್ ಅವರನ್ನು ಒತ್ತಾಯಿಸಿದೆ.