Home ದಕ್ಷಿಣ ಕನ್ನಡ ಮಂಗಳೂರು:ಮತ್ತೊಮ್ಮೆ ಕೊರಗಜ್ಜನ ಒಡಲಿಗೆ ಬಿತ್ತು ಬಳಸಿದ ಕಾಂಡೋಮ್ !! ಪವಿತ್ರ ಸ್ಥಾನಗಳ ಅಪವಿತ್ರಗೊಳಿಸುವ ಕಿಡಿಗೇಡಿ ಕೃತ್ಯಗಳಿಗೆ...

ಮಂಗಳೂರು:ಮತ್ತೊಮ್ಮೆ ಕೊರಗಜ್ಜನ ಒಡಲಿಗೆ ಬಿತ್ತು ಬಳಸಿದ ಕಾಂಡೋಮ್ !! ಪವಿತ್ರ ಸ್ಥಾನಗಳ ಅಪವಿತ್ರಗೊಳಿಸುವ ಕಿಡಿಗೇಡಿ ಕೃತ್ಯಗಳಿಗೆ ಕೊನೆ ಯಾವಾಗ!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು:ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೊಮ್ ಎಸೆದು ಕಿಡಿಗೇಡಿತನ ಮೆರೆದ ಪ್ರಕರಣ ಬೆಳಕಿಗೆ ಬಂದಿದ್ದು, ಕೊರಗಜ್ಜನ ಸ್ಥಾನವನ್ನು ಅಪವಿತ್ರಗೊಳಿಸಿದ ಈ ಘಟನೆ ಮಂಗಳೂರು ನಗರದ ನಂದಿಗುಡ್ಡೆ ಎಂಬಲ್ಲಿ ನಡೆದಿದೆ.

ಇಂದು ಮುಂಜಾನೆ ಬೆಳಕಿಗೆ ಬಂದ ಘಟನೆಯ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ವಿಹಿಂಪ ಭಜರಂಗದಳ ಸಹಿತ ಕೊರಗಜ್ಜನ ಭಕ್ತರು ಆಗ್ರಹಿಸಿದ್ದಾರೆ.

ಈ ಹಿಂದೆಯೂ ಮಂಗಳೂರಿನ ಹಲವಾರು ಕಡೆಗಳಲ್ಲಿ ಕೊರಗಜ್ಜನ ಅಪವಿತ್ರಗೊಳಿಸುವ ಘಟನೆಗಳು ನಡೆದಿತ್ತು. ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಬಬ್ಬುಸ್ವಾಮಿ, ಅತ್ತಾವರ ಕೊರಗಜ್ಜ ಕಟ್ಟೆ , ಉಳ್ಳಾಲದ ಕೊರಗಜ್ಜ ಕಟ್ಟೆ ಮುಂತಾದ ಹಲವು ಕಡೆಗಳಲ್ಲಿ ಇಂತಹ ನೀಚ ಕೃತ್ಯ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಅದಲ್ಲದೇ ಎಮ್ಮೆಕೆರೆ ಎಂಬಲ್ಲಿ ಬಬ್ಬುಸ್ವಾಮಿ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣದ ಪ್ರಮುಖ ನವಾಜ್ ಎಂಬಾತ ಸಾವನ್ನಪ್ಪಿದ ಬಳಿಕ ಭಾಗಿಯಾದ ಇತರ ಆರೋಪಿಗಳಾದ ಅಬ್ದುಲ್ ರಹೀಮ್, ಅಬ್ದುಲ್ ತೌಫಿಕ್ ಕ್ಷೇತ್ರಕ್ಕೆ ಬಂದು ಕ್ಷಮೆ ಯಾಚಿಸಿದ್ದರು.

ಇಂತಹ ಕಾರ್ಣಿಕವಿರುವ ಕ್ಷೇತ್ರಗಳಲ್ಲಿ ಅಪವಿತ್ರ ಗೊಳಿಸುವ ಘಟನೆಗಳು ನಡೆಯುತ್ತಲೇ ಇವೆ. ಆರೋಪಿಗಳ ಶೀಘ್ರ ಬಂಧನಕ್ಕಾಗಿ ಶಾಸಕ ವೇದವ್ಯಾಸ ಕಾಮತ್ ಕೂಡಾ ಪೊಲೀಸರನ್ನು ಆಗ್ರಹಿಸಿದ್ದು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ ಎಂಬುವುದು ಭಕ್ತಾದಿಗಳ ಮಾತು.