Home ದಕ್ಷಿಣ ಕನ್ನಡ Mangaluru: ಟಾರ್ಗೆಟ್ ಇಲ್ಯಾಸ್ ಹತ್ಯೆ ಆರೋಪಿಗಳು ದೋಷಮುಕ್ತ!! 2018 ರ ಬೆಳ್ಳಂಬೆಳಗ್ಗೆ ಕುಖ್ಯಾತ ‘ಟಾರ್ಗೆಟ್ ಗ್ಯಾಂಗ್’...

Mangaluru: ಟಾರ್ಗೆಟ್ ಇಲ್ಯಾಸ್ ಹತ್ಯೆ ಆರೋಪಿಗಳು ದೋಷಮುಕ್ತ!! 2018 ರ ಬೆಳ್ಳಂಬೆಳಗ್ಗೆ ಕುಖ್ಯಾತ ‘ಟಾರ್ಗೆಟ್ ಗ್ಯಾಂಗ್’ ಲೀಡರ್ ಹತ್ಯೆ ಬೆಚ್ಚಿಬೀಳಿಸಿತ್ತು

Target Illyas murder case

Hindu neighbor gifts plot of land

Hindu neighbour gifts land to Muslim journalist

 

Target Illyas murder case:ಒಂಭತ್ತು ವರ್ಷಗಳ ಕಾಲ ಮಂಗಳೂರು ನಗರದಲ್ಲಿ ಅಸಹ್ಯ ಅಧ್ಯಾಯದ ಮೂಲಕ ಕುಖ್ಯಾತಿ ಪಡೆದಿದ್ದ ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಹತ್ಯೆ(Target Illyas murder case)  ಪ್ರಕರಣದ ಐವರು ಆರೋಪಿಗಳನ್ನು ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ಹೊರಡಿಸಿದೆ.2018 ರಲ್ಲಿ ಪೊಲೀಸ್ ಇಲಾಖೆಗೇ ಕುತೂಹಲ ಉಂಟುಮಾಡಿದ್ದ ಈ ಪ್ರಕರಣ ಭೇದಿಸಿ ಐದು ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದ್ದು,ದೀಪಕ್ ರಾವ್, ಬಶೀರ್ ಹತ್ಯೆಯ ಬಳಿಕ ಶಾಂತವಾಗಿದ್ದ ಕರಾವಳಿಯಲ್ಲಿ ಇಲ್ಯಾಸ್ ಹತ್ಯೆ ನಗರವನ್ನು ಬೆಚ್ಚಿ ಬೀಳಿಸಿತ್ತು.

ಯಾರೀತ ಟಾರ್ಗೆಟ್ ಇಲ್ಯಾಸ್?

ಮಂಗಳೂರಿನ ಉಳ್ಳಾಲ ಪರಿಸರದಲ್ಲಿ ಟಾರ್ಗೆಟ್ ಹೆಸರಿನ ಮೂಲಕ ಪಾತಕ ಲೋಕಕ್ಕೆ ಎಂಟ್ರಿ ಪಡೆದ ತಂಡದ ರೂವಾರಿಯಾಗಿದ್ದ ಇಲ್ಯಾಸ್ ಸುಮಾರು 23 ಕ್ಕೂ ಮಿಕ್ಕಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದ.ಕೊಲೆ, ಸುಲಿಗೆ, ಅತ್ಯಾಚಾರ, ಹನಿಟ್ರ್ಯಾಪ್ ಸಹಿತ ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿ ಜೋಡಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.ಟಾರ್ಗೆಟ್ ಗ್ಯಾಂಗ್ ನಗರದಲ್ಲಿ ಹಲವಾರು ಕುಕೃತ್ಯ ನಡೆಸಿದ್ದು, ಪಾಪದ ಕೊಡ ತುಂಬುತ್ತಿದ್ದಂತೆ ಗ್ಯಾಂಗ್ ಲೀಡರ್ ಟಾರ್ಗೆಟ್ ಆಗಿದ್ದ.

ಬೆಳ್ಳಂಬೆಳಗ್ಗೆ ಹೆತ್ತತಾಯಿ ಕಣ್ಣೆದುರಲ್ಲೇ ಕೊಚ್ಚಿ ಕೊಲೆಯಾದ ಇಲ್ಯಾಸ್!

ಮಂಗಳೂರಿನ ಜೆಪ್ಪು ಬಳಿಯ ಕುಡ್ಪಾಡಿ ಬಳಿಯ ಮಸೀದಿ ಪಕ್ಕದ ಫ್ಲಾಟ್ ಒಂದರಲ್ಲಿ ತಾಯಿ, ಪತ್ನಿ ಹಾಗೂ ಮಗುವಿನೊಂದಿಗೆ ವಾಸ್ತವ್ಯ ಹೂಡಿದ್ದ ಇಲ್ಯಾಸ್ ನನ್ನು 2018 ರ ಜನವರಿ 18 ರ ಶನಿವಾರ ಮುಂಜಾನೆ ಸುಮಾರು 09 ಗಂಟೆಯ ಹೊತ್ತಿಗೆ ಕಾರಿನಲ್ಲಿ ಬಂದಿದ್ದ ಇಬ್ಬರು ಹಂತಕರು ಮನೆಗೆ ನುಗ್ಗಿ ಹೆತ್ತ ತಾಯಿಯ ಎದುರಲ್ಲೇ ಭೀಕರವಾಗಿ ಕೊಲೆ ನಡೆಸಿದ್ದರು.ಮಚ್ಚಿನ ಏಟಿಗೆ ಶ್ವಾಸಕೋಶಕ್ಕೆ ಏಟು ಬಿದ್ದ ಪರಿಣಾಮ ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಇಲ್ಯಾಸ್ ಮೃತಪಟ್ಟಿದ್ದ.

ಹಲವಾರು ಹನಿಟ್ರ್ಯಾಪ್, ದರೋಡೆ, ಕೊಲೆ ಪ್ರಕರಣಗಳ ಮೂಲಕ ಮಂಗಳೂರು ನಗರದಲ್ಲಿ ಭೀತಿ ಹುಟ್ಟಿಸಿದ್ದ ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆಯ ಬಳಿಕ ನಡುಗಿದ್ದು, ಪಾತಕಿಗಳು ಒಬ್ಬೊಬ್ಬರಾಗಿಯೇ ಪೊಲೀಸರ ಲಾಠಿ ಏಟಿಗೆ
ಸೈಲೆಂಟ್ ಆಗಿದ್ದರು. ಇಲ್ಯಾಸ್ ಹತ್ಯೆ ಆರೋಪಿಗಳನ್ನು ಪೊಲೀಸರು ತೀವ್ರ ತನಿಖೆಯ ಬಳಿಕ ಬಂಧಿಸಿ ಜೈಲಿಗಟ್ಟಿದ್ದು,ಐದು ವರ್ಷಗಳ ಬಳಿಕ ಪ್ರಕರಣದ ಐವರು ಆರೋಪಿಗಳು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ – ಸಚಿವರಿಂದ ಹೊಸ ಘೋಷಣೆ!!