Home ದಕ್ಷಿಣ ಕನ್ನಡ ಮಂಗಳೂರು ಸ್ಪೋಟ ಕೇಸ್‌ ಬೆನ್ನಲ್ಲೆ ಮತ್ತೊಂದು ಮಾಹಿತಿ ಬಹಿರಂಗ : ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್...

ಮಂಗಳೂರು ಸ್ಪೋಟ ಕೇಸ್‌ ಬೆನ್ನಲ್ಲೆ ಮತ್ತೊಂದು ಮಾಹಿತಿ ಬಹಿರಂಗ : ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ?

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿದೆ. ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿದ್ದು, ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ನಡೀತಾ ಸುದ್ದಿ ಕೇಳಿ ಬಂದಿದೆ
ಬೆಳ್ತಂಗಡಿಯಲ್ಲಿ ಸಾಟ್ ಲೈಟ್ ಕಾಲ್ ಸದ್ದು ಮಾಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಧರ್ಮಸ್ಥಳ ಪಿಎಸ್‍ಐ ಅನಿಲ್ ಕುಮಾರ್ ತಂಡದಿಂದ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶ ದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ ಹಿನ್ನೆಲೆಯಲ್ಲಿ ಬೆಂದ್ರಾಳ ಸುತ್ತಮುತ್ತ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಮಂಗಳೂರು ಬಾಂಬ್ ಬ್ಲಾಸ್ಟ್ ಹಿಂದಿನ ದಿನ ಸಾಟಲೈಟ್ ಕಾಲ್ ಸದ್ದು ಮಾಡಿತ್ತು. ಕಳೆದ ಏಳೆಂಟು ದಿನದ ಹಿಂದೆ ಚಾರ್ಮಾಡಿ ಅರಣ್ಯದಂಚಿನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಆತಂಕ ಸೃಷ್ಟಿಯಾಗಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಪ್ರಮಾಣದ ಸ್ಪೋಟದ ಸದ್ದು ಕೇಳಿಸಿತ್ತು. ಅದೊಂದು ಭಾರೀ ಸದ್ದು ಕೇಳಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಗಿತ್ತು.ಸ್ಯಾಟಲೈಟ್ ಕರೆ ಹಿಂದೆ ಬಿದ್ದ ಪೊಲೀಸರಿಗೆ ಗ್ರಾಮಸ್ಥರು ಈ ಮಾಹಿತಿಯನ್ನು ನೀಡಿದರು. ಚೆಲುವಮ್ಮ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಭಾರೀ ಪ್ರಮಾಣದ ಸದ್ದು ಕೇಳಿಬಂದಿತ್ತು. ಆನೆ ಬಂದಾಗ ಓಡಿಸಲು ಗರ್ನಲ್, ಪಟಾಕಿ ಅಂತಾ ಎಲ್ಲರೂ ಅಂದುಕೊಂಡಿದ್ದೆವು. ಆದರೆ ಅದು ಗರ್ನಲ್ ಪಟಾಕಿ ಸೌಂಡ್ ಗಿಂತ ಹೆಚ್ಚಾಗಿತ್ತು ಅಂತಾ ಮಾಹಿತಿ ಅಂತ ತಿಳಿಸಿದ್ದರು.