Home ದಕ್ಷಿಣ ಕನ್ನಡ House Warming: ದಿವಂಗತ ಪ್ರವೀಣ್ ನೆಟ್ಟಾರು ಹೊಸ ಮನೆಯ ಗೃಹ ಪ್ರವೇಶ ಏಪ್ರಿಲ್ 27 ರಂದು...

House Warming: ದಿವಂಗತ ಪ್ರವೀಣ್ ನೆಟ್ಟಾರು ಹೊಸ ಮನೆಯ ಗೃಹ ಪ್ರವೇಶ ಏಪ್ರಿಲ್ 27 ರಂದು ನಿಗದಿ!

Hindu neighbor gifts plot of land

Hindu neighbour gifts land to Muslim journalist

House Warming: ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು( Praveen Nettaru) ಅವರ ಹತ್ಯೆ ಪ್ರಕರಣ ಕರಾವಳಿಯಲ್ಲಿ ತಲ್ಲಣ ಉಂಟು ಮಾಡಿತ್ತು. ಬಿಜೆಪಿ(BJP) ಪಕ್ಷದ ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಅವರ ಸಾವು (Death)ಬಿಜೆಪಿ ಹಾಗೂ ಕರಾವಳಿಯ ಜನತೆಯ ನಿದ್ದೆಗೆಡಿಸಿತ್ತು. ಸದ್ಯ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳ ಪತ್ತೆಗೆ ಖಾಕಿ ಪಡೆ ನಿರತವಾಗಿರುವ ಬೆನ್ನಲ್ಲೇ ಪ್ರವೀಣ್ ಅವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಿರ್ಮಾಣವಾಗುತ್ತಿರುವ ಪ್ರವೀಣ್ ನೆಟ್ಟಾರು ಅವರ ಮನೆಯ ಗೃಹ ಪ್ರವೇಶ ಇದೇ 27ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

ಸುಳ್ಯ (Sulia) ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ಮನೆಯನ್ನು(House) ನಿರ್ಮಿಸಲಾಗಿದ್ದು, ಈ ಮನೆಗೆ’ ಪ್ರವೀಣ್ ‘ಎಂದು ನಾಮಕರಣ ಕೂಡ ಮಾಡಲಾಗಿದೆ. ಮನೆ ಗೃಹ( House Warming)ಪ್ರವೇಶದ ಹಿನ್ನೆಲೆ ದಿನಾಂಕ 27ರಂದು ಬೆಳಗ್ಗೆ 8:40ಕ್ಕೆ ಶ್ರೀ ಗಣಪತಿ ಹೋಮ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಅದೇ ದಿನ ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನರ್ತನ ಸೇವೆ ಕೂಡ ನಡೆಯಲಿರುವ ಕುರಿತು ಕುಟುಂಬದ ಮೂಲಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ದಿವಂಗತ ಪ್ರವೀಣ್ ನೆಟ್ಟಾರು ಅವರ ಕುಟುಂಬದವರು ನೀಡಿದ ನಕ್ಷೆಯ ಅನುಸಾರ, ಕುಟುಂಬದ ಬಯಕೆಯಂತೆ ಕುಟುಂಬ ವಾಸವಿದ್ದ ಜಾಗದಲ್ಲೇ ಮನೆ ನಿರ್ಮಿಸಲಾಗಿದೆ. 2,700 ಚದರ ಅಡಿ ವಿಸ್ತೀರ್ಣದ ಹೊಂದಿರುವ ಮನೆಯ ಸಲುವಾಗಿ, 60 ಲಕ್ಷ ತಗುಲಿದ್ದು, ಈ ಸಂಪೂರ್ಣ ವೆಚ್ಚವನ್ನು ಪಕ್ಷದಿಂದಲೇ ಭರಿಸಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ ಎನ್ನಲಾಗಿದೆ.