

ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದೂ ಮಹಿಳೆಯೊಬ್ಬರ ಕಾಯಿಲೆಯನ್ನು ಮಂತ್ರವಾದದಿAದ ಗುಣಪಡಿಸಲೆಂದು ಬಂದ ಅನ್ಯಮತಿಯ ವ್ಯಕ್ತಿಯೋರ್ವರು ಆ ಮನೆಯಲ್ಲಿರುವುದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಮಂತ್ರವಾದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರಿರುವುದು ಮಂಗಳವಾರ ಸಾಯಂಕಾಲ ಕೊಂಬಾರಿನಲ್ಲಿ ನಡೆದಿದೆ.

ಘಟನೆಗೆ ಸಂಬಂದಪಟ್ಟಂತೆ ಮೂಲತಃ ಬಂಟ್ವಾಳ ತಾಲೂಕು ವಗ್ಗ ನಿವಾಸಿ, ಪ್ರಸ್ತುತ ಬೆಂಗಳೂರಿನ ಚಿಂತಾಮಣಿ ಭಾಗದಲ್ಲಿ ದರ್ಗಾವೊಂದರಲ್ಲಿಕಾರ್ಯನಿರ್ವಹಿಸುವ ಆಬೀದ್ ಎಂಬಾತ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಿಂಬೆ ಹುಳಿಯಲ್ಲಿ ಏನೋ ಕ್ರಿಯೆಗಳನ್ನು ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಕಡಬ ವಿ.ಹಿಂ.ಪ ಕಾರ್ಯದರ್ಶಿ ಪ್ರಮೋದ್ ರೈಯವರಿಗೆ ಮಾಹಿತಿ ನೀಡಿದ್ದು ಕೂಡಲೇ ತಕ್ಷಣ ಹಾಗೂ ಕೊಂಬಾರಿನ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಅಲ್ಲಿ ವಿಚಾರಿಸಿದ್ದು, ಆತ ಕಪಟ ಮಂತ್ರವಾದಿ ಏನೋ ದುರುದ್ದೇಶದಿಂದ ಅನಾರೋಗ್ಯ ಪೀಡಿತ ಕುಟುಂಬವನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಎಂದು ಆಪಾದಿಸಿ ಕಡಬ ಪೋಲಿಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೋಲಿಸರು ಆಗಮಿಸಿ ಮಂತ್ರವಾದಿ ಎನ್ನಲಾದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.
ಹಿಂದೂ ಸಂಘಟನೆಯವರ ವಿರುದ್ದ
ಅನಾರೋಗ್ಯ ಪೀಡಿತರ ರಂಪಾಟ:
ಅನ್ಯಮತಿಯ ವ್ಯಕ್ತಿಯೋರ್ವ ಕೆಲವು ದಿನಗಳಿಂದ ಆ ಮನೆಗೆ ಭೇಟಿ ಕೊಡುತ್ತಿದ್ದ, ಅಲ್ಲದೆ ಇಂದು ಕೂಡ ಮನೆಯೊಳಗಡೆ ಇದ್ದಾನೆ ಎನ್ನುವ ಸ್ಥಳೀಯರ ಮಾಹಿತಿಯನ್ವಯ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಆ ಮನೆಗೆ ಭೇಟಿ ನೀಡಿದ ವೇಳೆ ಮನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಅವರ ಗಂಡAದಿರು, ಮನೆ ಮಂದಿ ಇದ್ದರು. ಮನೆಗೆ ಭೇಟಿ ನೀಡುತ್ತಿದ್ದಂತೆ ಇಬ್ಬರು ಮಹಿಳೆಯರೂ ತಮಗೆ ಏನೋ ದೆವ್ವ ಬಂದAತೆ ವರ್ತಿಸಿ ಬಂದವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಈ ವೇಳೆ ಮನೆಯ ಪುರುಷರು ಕೂಡ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿ, ಈಗಾಗಲೇ ಆ ವ್ಯಕ್ತಿಯಿಂದ ಇವರ ಅರ್ಧ ಕಾಯಿಲೆ ಗುಣವಾಗಿತ್ತು, ಅವರ ಮೈಗೆ ಯಾವೋದೋ ದೈವಿ ಶಕ್ತಿ ಆವರಿಸಿದೆ ಅದನ್ನು ಈ ಮಂತ್ರವಾದಿಯವರು ಸರಿ ಮಾಡುತ್ತಾರೆ, ಇನ್ನು ನೀವೇ ಸರಿ ಮಾಡಿ ನೋಡೋನ ಎಂದು ಸವಾಲು ಹಾಕಿದರು. ಬಳಿಕ ಪೋಲಿಸರು ಬಂದಾಗಲೂ ಆ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಂತ್ರವಾದಿ ಸಮಾಧಾನ ಹೇಳುತ್ತಿದ್ದುದು ಕಂಡು ಬಂತು.
ಈ ಹಿಂದೆ ಕೊಂಬಾರು ಭಾಗದಲ್ಲಿ ಮಹಿಳೆಯೊಬ್ಬರ ಪ್ರೇತ ಭಾದೆಯನ್ನು ಈತ ಬಿಡಿಸಿದ್ದ ಈತ ಅಲ್ಲಿ ಬಂದಾಗ ಈ ಮನೆಯವರಿಗೆ ಸಂಪರ್ಕವಾಗಿ ಈ ಹಿಂದೆ ಮೂರು ನಾಲ್ಕು ಬಾರಿ ಬಂದಿದ್ದರು ಎಂದು ತಿಳಿದು ಬಂತು. ಬಳಿಕ ಪೋಲಿಸರು ಮುಚ್ಚಲಿಕೆ ಬರೆದುಕೊಂಡು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ, ಮಾಟ ಮಂತ್ರವಾದಗಳಿಗೆ ಹೆಚ್ಚು ಬಲಿ ಬೀಳಬೇಡಿ ಎಂದು ಹೇಳಿ ಕಳಿಸಿದ್ದಾರೆ.














