Home ದಕ್ಷಿಣ ಕನ್ನಡ Suicide: ಬದುಕ ಕೈ ಚೈಲ್ಲಿದ ಯುವತಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿದ ಕೆಯ್ಯೂರಿನ ಯುವತಿ :...

Suicide: ಬದುಕ ಕೈ ಚೈಲ್ಲಿದ ಯುವತಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿದ ಕೆಯ್ಯೂರಿನ ಯುವತಿ : ಏಕೈಕ ಮಗಳ ಕಳೆದುಕೊಂಡ ಹೆತ್ತವರು

Sucide

Hindu neighbor gifts plot of land

Hindu neighbour gifts land to Muslim journalist

Keyyur women Suicide: ಬಾಳಿ ಬದುಕಬೇಕಾದ ಚಿಗುರುವ ಹೂವೊಂದು ಅರಳುವ ಮುನ್ನ ಬಾಡಿ ಹೋಗಿದೆ. ಹೌದು, ದಕ್ಷಿಣ ಕನ್ನಡದ ಪುತ್ತೂರಿನ ಯುವತಿಯೋರ್ವರು ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ (Keyyur women Suicide) ಘಟನೆ ನಡೆದಿದೆ.

ಇತ್ತೀಚೆಗೆ ಬೆಂಗಳೂರುನಲ್ಲಿ ಆನಿಮೇಷನ್ ಶಿಕ್ಷಣ ಪಡೆಯುತ್ತಿದ್ದ ಶ್ರುತಿ ಕೋರ್ಸ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಆದರೆ ಜೀವನದಲ್ಲಿ ನಿರಾಸೆಯಾಗಿ ಭರವಸೆ ಕಳೆದುಕೊಂಡು, ಒಂಟಿಯಾಗಿದ್ದ ಕಾರಣ ಮನಸು ವಿಚಲಿತಗೊಂಡು, ಬಾಡಿಗೆ ರೂಮಲ್ಲಿದ್ದ ಅವರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಪಾಷಾಣ ಸೇವಿಸಿದ ನಂತರ ಯುವತಿ ಹೊಟ್ಟೆ ನೋವಿನಿಂದ ಕೂಗಾಡುತ್ತಿರುವುದು ಸ್ಥಳೀಯರಿಗೆ ಕೇಳಿಸಿದ್ದು, ನಂತರ ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಏ.30ರಂದು ಮೃತಪಟ್ಟಿದ್ದು ಮೇ 1ರಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಗಿದೆ.

ಮೃತ ಶ್ರುತಿ ಸಿ.ರೈ ಅವರು ಕೆಯ್ಯೂರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಆಶಾ ಕಾರ್ಯಕರ್ತೆ ಸೋಮಾವತಿ ರೈ ದಂಪತಿಯ ಪುತ್ರಿ ಆಗಿದ್ದರು.

ಇದನ್ನೂ ಓದಿ:ಭಜರಂಗದಳ ನಿಷೇಧ ವಾಪಸ್ ಇಲ್ಲ : ಕಾಂಗ್ರೆಸ್ ನಿರ್ಧಾರ !