Home ದಕ್ಷಿಣ ಕನ್ನಡ ಕಂದಾಯ ಭೂಮಿ ಅತಿಕ್ರಮಣವಾದರೆ ಕೈಕಟ್ಟಿ ಕೂರಲ್ಲ ಎಂದ ತಹಸೀಲ್ದಾರ್ ಮಹೇಶ್ !, ರಾತ್ರೋ ರಾತ್ರಿ ಕಂದಾಯ...

ಕಂದಾಯ ಭೂಮಿ ಅತಿಕ್ರಮಣವಾದರೆ ಕೈಕಟ್ಟಿ ಕೂರಲ್ಲ ಎಂದ ತಹಸೀಲ್ದಾರ್ ಮಹೇಶ್ !, ರಾತ್ರೋ ರಾತ್ರಿ ಕಂದಾಯ ಭೂಮಿಯಲ್ಲಿ ಕಟ್ಟಿದ ಅಕ್ರಮ ಕಟ್ಟಡ ಕಂದಾಯ ಅಧಿಕಾರಿಗಳಿಂದ ತೆರವು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕಂದಾಯ ಇಲಾಖೆಯ ಭೂಮಿ ಅತಿಕ್ರಮಣ ಕದ್ದುಮುಚ್ಚಿ ನಡೆಯುತ್ತಿದ್ದರೂ ಸರ್ಕಾರದ ಗಮನಕ್ಕೆ ಬರುವುದು ವಿರಳ. ದರೆ ‘ಬೆಳ್ತಂಗಡಿ ತಾಲೂಕಿನ ಕಂದಾಯ ಭೂಮಿ ಅತಿಕ್ರಮಣವಾದರೆ ಕೈಕಟ್ಟಿ ಕೂರಲ್ಲ: ಅತಿಕ್ರಮಣದಾರರಿಗೆ ಬಿಸಿ ಮುಟ್ಟಿಸಿಯೇ ಬಿಡುತ್ತೇವೆ., ಸರ್ಕಾರಿ ಭೂಮಿ ಅತಿಕ್ರಮಿಸಿದರೆ ಹುಷಾರ್! ಎಂದು ತಹಸೀಲ್ದಾರ್ ಮಹೇಶ್ ಇತ್ತೀಚೆಗೆ ಅತಿಕ್ರಮಣಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.

ಡಿ.31ರ ರಾತ್ರಿ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮುಸ್ಲಿಂ ಕುಟುಂಬಕ್ಕೆ ಸೇರಿದ 4 ಜನ ಕಂದಾಯ ಇಲಾಖೆಯ ಭೂಮಿ ಅತಿಕ್ರಮಿಸಿ ರಾತ್ರೋ ರಾತ್ರಿ ಶೆಡ್ ನಿರ್ಮಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಅವರು ಅತಿಕ್ರಮಣಗೊಂಡ ಭೂಮಿಯನ್ನು 24ಗಂಟೆಯೊಳಗೆ ಕಾರ್ಯಾಚರಣೆ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ನೇತೃತ್ವದಲ್ಲಿ ಸುಮಾರು 30 ಎಕರೆಗೂ ಅಧಿಕ ಕಂದಾಯ ಭೂಮಿಯನ್ನು ಕಾರ್ಯಚರಣೆ ನಡೆಸಿ ಅತಿಕ್ರಮಣ ತೆರವುಗೊಳಿಸಲಾಗಿತ್ತು.

ಈ ಕಾರ್ಯಚರಣೆ ವೇಳೆ ವೇಣೂರು ಹೋಬಳಿ ಕಂದಾಯ ಅಧಿಕಾರಿ ಎಂ.ಎನ್ ರವಿ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಚರಣೆಯಲ್ಲಿದ್ದರು.

ಡಿಸೆಂಬರ್ 31 ಕುಕ್ಕೇಡಿಯ ಹಲವೆಡೆ ಮನೆಯಲ್ಲೇ ಹೊಸವರ್ಷ ಸಂಭ್ರಮಾಚರಣೆಯಿದ್ದರೆ ಕುಕ್ಕೇಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಲವರು ಕಂದಾಯ ಭೂಮಿ ಅತಿಕ್ರಮಿಸಿ ಶೆಡ್ ನಿರ್ಮಾಣದಲ್ಲಿ ತೊಡಗಿದ್ದರು.

ಅತಿಕ್ರಮಣದ ಮಾಹಿತಿಯು ವೇಣೂರು ಹೋಬಳಿ ಕಂದಾಯ ಅಧಿಕಾರಿ ಎಂ.ಎನ್ ರವಿ ಅವರಿಂದ ಪಡೆದುಕೊಂಡ ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಅವರು ತಕ್ಷಣ ಅತಿಕ್ರಮಣ ತೆರವುಗೊಳಿಸುವಂತೆ ನಿರ್ಧೇಶನ ನೀಡಿದ್ದರು.

ಜನವರಿ 1ರಂದು ಬೆಳಗ್ಗೆ ತಹಸೀಲ್ದಾರ್ ನಿರ್ದೇಶನದಂತೆ ಕಂದಾಯ ಅಧಿಕಾರಿ ಎಂ.ಎನ್ ರವಿ ನೇತೃತ್ವದ ಅಧಿಕಾರಿಗಳಿಂದ ಕುಕ್ಕೇಡಿ ಸುತ್ತಮುತ್ತ ಅತಿಕ್ರಮಣ, ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.

ತೆರವು ವೇಳೆ ಕೆಲವರಿಂದ ಪ್ರತಿರೋಧ ವ್ಯಕ್ತವಾದರೂ ಕ್ಯಾರೆ ಮಾಡದ ಕಂದಾಯ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿದರು. ಈ ಮೂಲಕ ಅತಿಕ್ರಮಣಗೊಂಡ 24 ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವ ಕಾರ್ಯ ಯಶಸ್ವಿಯಾಗಿದೆ.

ತೆರವು ಕಾರ್ಯಾಚರಣೆಯಲ್ಲಿ ಗ್ರಾಮ ಸಹಾಯಕರಾದ ಹರೀಶ್, ಸಂಜೀವ, ಕುಕ್ಕೇಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ, ಪಿಡಿಒ ನವೀನ್, ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಕಳೆದ 1-2 ತಿಂಗಳಿನಿಂದ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಭೂಮಿ ಅತಿಕ್ರಮಣ ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಸೇರಿದಂತೆ ಸಾರ್ವಜನಿಕರಿಗೆ ಬೆಳ್ತಂಗಡಿ ಕಂದಾಯ ಇಲಾಖೆಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.