Home ದಕ್ಷಿಣ ಕನ್ನಡ ಕಡಬ :ಮಂಗಳೂರಿನಲ್ಲಿ ಗಣ್ಯರನ್ನು ಗೌರವಿಸಿದ ಗ್ರಾಮೀಣ ಮಹಿಳೆಯರ ಕೈಚಳಕದಲ್ಲಿ ಮೂಡಿ ಬಂದ ಹೂ ಗುಚ್ಚಗಳು

ಕಡಬ :ಮಂಗಳೂರಿನಲ್ಲಿ ಗಣ್ಯರನ್ನು ಗೌರವಿಸಿದ ಗ್ರಾಮೀಣ ಮಹಿಳೆಯರ ಕೈಚಳಕದಲ್ಲಿ ಮೂಡಿ ಬಂದ ಹೂ ಗುಚ್ಚಗಳು

Hindu neighbor gifts plot of land

Hindu neighbour gifts land to Muslim journalist

ಕಡಬ : ಮಂಗಳೂರಿನ ಪುರಭವನದಲ್ಲಿ ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ ದಲ್ಲಿ ಧ.ಗ್ರಾ.ಯೋ. ಕಡಬ ವಲಯದ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ ತಯಾರಿಸಿ ನೀಡಲಾದ ಆಕರ್ಷಕ ಹೂ ಗುಚ್ಚಗಳು ಗಮನ ಸೆಳೆದಿದೆ.

ಕಾರ್ಯಕ್ರಮ ಕ್ಕೆ ಕಡಬದ ಸದಸ್ಯರು ಸುಮಾರು ನೂರಕ್ಕಿಂತಲೂ ಹೆಚ್ಚು ಹೂ ಗುಚ್ಚಗಳನ್ನು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕಡಬ ಪಿಜಕಳ ದಲ್ಲಿ ನಡೆದ ಹಾಜಬ್ಬನವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಕಾರ್ಯನಿರತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆಯವರಿಗೆ ಕಾರ್ಯಕ್ರಮದಲ್ಲಿ ನೀಡಲಾದ ಹೂ ಗುಚ್ಚಗಳನ್ನು ನೋಡಿ ಖುಷಿಪಟ್ಟಿದ್ದರು.

ಆ ಹೂ ಗುಚ್ಚಗಳನ್ನು ತಯಾರಿಸಿದ ಧ.ಗ್ರಾ.ಯೋ. ಸದಸ್ಯರಲ್ಲಿ ಮಾತನಾಡಿ ಕಾರ್ಯಕ್ರಮಕ್ಕೂ ತಯಾರಿಸಿ ಕೊಡುವಂತೆ ವಿನಂತಿಸಿದ್ದರು.ಅದರಂತೆ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ,ಕಾರ್ಯದರ್ಶಿ ವಿಜಯ ಕುಮಾರ್ ಕಡಬ ಅವರ ನೇತೃತ್ವದಲ್ಲಿ ಹೂಗುಚ್ಚವನ್ನು ಮಂಗಳೂರಿನಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ಗಣ್ಯರಿಗೆ ನೀಡಲಾಯಿತು.