Home ದಕ್ಷಿಣ ಕನ್ನಡ ಸುಬ್ರಹ್ಮಣ್ಯ : ನಾಪತ್ತೆಯಾಗಿರುವ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆ ಹೇಳಿಕೆಯ ವಿಡಿಯೋ ವೈರಲ್

ಸುಬ್ರಹ್ಮಣ್ಯ : ನಾಪತ್ತೆಯಾಗಿರುವ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆ ಹೇಳಿಕೆಯ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಕಡಬ : ಇತ್ತೀಚೆಗೆ ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆಯವರ ಹೇಳಿಕೆಯ ವೀಡಿಯೋವೊಂದು ವೈರಲ್ ಆಗುತ್ತಿದೆ.

ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಅವರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದ್ರು. ೫ ವರ್ಷದಿಂದ ನಾನು ಲವ್ ಮಾಡ್ತಾ ಇದ್ದೆ. ಈಗಲೂ ಮಾಡ್ತಾ ಇದ್ದೇನೆ. ಮದುವೆಗೆ ಮುಂಚೆನೂ ಲವ್ ಮಾಡ್ತಿದ್ದೆ.

ಇದರಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ. ಯಾರತ್ರ ಕೇಳುವುದೂ ಬೇಡ. ನಮಗೆ ತೊಂದರೆ ಕೊಡಬೇಡಿ. ಹಾಗೇನಾದ್ರೂ ಮಾಡಿದ್ರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ಖುಷಿಯಾಗಿಯೇ ಇದ್ದೇನೆ. ಆಮೇಲೆ ಏನಾದ್ರೂ ಆದರೆ ನೀವೇ ಜವಾಬ್ದಾರರು ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.