Home ದಕ್ಷಿಣ ಕನ್ನಡ ಕಡಬ ಮತ್ತು ಕಳಾರದಲ್ಲಿ ಭರ್ಜರಿ ಮದ್ಯ ಮಾರಾಟಮೂವರು ಪೋಲಿಸ್ ವಶಕ್ಕೆ | ಪೋಲಿಸರನ್ನು ಕಂಡೊಡನೆ ಓಟ...

ಕಡಬ ಮತ್ತು ಕಳಾರದಲ್ಲಿ ಭರ್ಜರಿ ಮದ್ಯ ಮಾರಾಟ
ಮೂವರು ಪೋಲಿಸ್ ವಶಕ್ಕೆ | ಪೋಲಿಸರನ್ನು ಕಂಡೊಡನೆ ಓಟ ಕಿತ್ತ ಮದ್ಯಪ್ರಿಯರು!!

Hindu neighbor gifts plot of land

Hindu neighbour gifts land to Muslim journalist

ಕಡಬ: ಕಡಬ ಮತ್ತು ಕಳಾರದಲ್ಲಿ ಅಕ್ರಮವಾಗಿ ಮದ್ಯ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು ಪೋಲಿಸರು ದಾಳಿ ನಡೆಸಿದ್ದು, ಪೋಲಿಸರನ್ಬು ಕಂಡೋಡನೆ ಮದ್ಯ ಖರೀದಿ ಮಾಡಲು ಬಂದವರು ಹಾಗೂ ಮಾರಾಟ ಮಾಡುತ್ತಿರುವವರು ಪೋಲಿಸರನ್ನು ಕಂಡೊಡನೆ ಓಟ ಕಿತ್ತಿದ್ದಾರೆ.ಈ ಮಧ್ಯೆ ಮೂವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಅವರಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕಡಬದಲ್ಲಿ ಡ್ರಮ್ ನಲ್ಲಿಟ್ಟು ಮದ್ಯ ಮಾರಾಟ ಮಾಡಲಾಗುತ್ತಿದ್ದು ಮದ್ಯಪ್ರಿಯರು ಮದ್ಯ ಖರೀದಿಸಲು ಮುಗಿ ಬೀಳುತ್ತಿರುವ ದೃಶ್ಯ ಕಂಡು ಬಂದಿದೆ. ವೀಕೆಂಡ್ ಕರ್ಪ್ಯೂ ಇದ್ದು ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ ಆದರೂ ಮದ್ಯವನ್ನು ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮಾಹಿತಿ ಪಡೆದ ಪೋಲಿಸರು ದಾಳಿ ನಡೆಸಿದಾಗ ಮೂವರು ಪೋಲಿಸ್ ವಶವಾಗಿದ್ದಾರೆ. ಉಳಿದವರು ಓಡಿ ತಪ್ಪಿಸಿಕೊಂಡಿದ್ದಾರೆ.

ವೀಡಿಯೋ ಮಾಡಿದ ಮಾಧ್ಯಮದವರನ್ನು ಗದರಿಸಿದ ಪೋಲಿಸರು!

ಈ ಮದ್ಯೆ ಮದ್ಯ ಮಾರಾಟದ ದಾಳಿಯ ಮಾಹಿತಿ ತಿಳಿದ ಮಾಧ್ಯಮದ ಓರ್ವರು ಘಟನೆಯ ವೀಡಿಯೋ ಮಾಡಿ ಬರುತ್ತಿದ್ದ ವೇಳೆ ಪೋಲಿಸರು ಹಿಂಬಾಳಿಸಿ ತಡೆದು ನಿಲ್ಲಿಸಿ ಮೊಬೈಲ್ ಕೊಡುವಂತೆ ಗದರಿಸಿದ್ದರು. ಬಳಿಕ ವಿವರಣೆ ನೀಡಿದಾಗ ಪೋಲಿಸರು ತೆರಳಿದರು ಎಂದು ತಿಳಿದು ಬಂದಿದೆ.