Home ದಕ್ಷಿಣ ಕನ್ನಡ ಎರಡು ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಅಶೋಕ್ ಕುಮಾರ್ ರೈ

ಎರಡು ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಅಶೋಕ್ ಕುಮಾರ್ ರೈ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ಹಾಗೂ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿನ ಸೂರಿಲ್ಲದ ಎರಡು ಬಡ ಕುಟುಂಬಗಳಿಗೆ ಉದ್ಯಮಿ, ಕೋಡಿಂಬಾಡಿ ರೈ ಎಸ್ಟೇಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಪ್ರವರ್ತಕ ಅಶೋಕ್ ಕುಮಾರ್ ರೈ ಅವರಿಗೆ ನೂತನ ಮನೆ ನಿರ್ಮಿಸಿ ಶನಿವಾರ ಸಂಜೆ ಹಸ್ತಾಂತರಿಸಲಾಯಿತು.

ಮಡ್ಯಂಗಳ ನಿವಾಸಿಗಳಾದ ನಿವಾಸಿ ಬಾಬು ರೈ ದಂಪತಿ ಹಾಗೂ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಬಡ ಕುಟುಂಬವಾದ ರಾಮ ನಾಯ್ಕ ಎಂಬವರಿಗೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.

ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಕೊಟ್ಟಿಗೆಯಲ್ಲಿ ವಾಸಿಸುತ್ತಿದ್ದ ಬಾಬು ರೈ ಅವರ ಪರಿಸ್ಥಿತಿಯನ್ನು ಕೌಡಿಚ್ಚಾರ್ ಅಶೋಕ್ ರೈ ಅಭಿಮಾನಿ ಬಳದವರು ಕಂಡು ಅಶೋಕ್ ರೈ ಅವರಲ್ಲಿ ತಿಳಿಸಿದ ಮನೆ ನಿರ್ಮಿಸಿಕೊಡುವ ಮನವಿಯಂತೆ ಮನೆ ನಿರ್ಮಿಸಲಾಗಿದೆ. ಅದೇ ರೀತಿ ಅಂಬಟೆಮೂಲೆ ಎರುಕೊಟ್ಯ ಎಂಬಲ್ಲಿನ ರಾಮ ನಾಯ್ಕ ಅವರ ಪತ್ನಿ ಕಳೆದ ಆರು ವರ್ಷಗಳಿಂದ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಈ ಕುಟುಂಬದ ಮನೆಯ ಗೋಡೆ ಕುಸಿದುಬಿದ್ದಿದ್ದು ಅತಂತ್ರ ಸ್ಥಿತಿಯಲ್ಲಿದ್ದುದನ್ನು ಕಂಡು ಮನೆ ನಿರ್ಮಿಸಿ ಕೊಡಲಾಗಿದೆ.

ಈ ಎರಡು ಮನೆಯನ್ನು ದೀಪ ಬೆಳಗಿಸಿ, ಫಲಪುಷ್ಪ ನೀಡುವ ಮೂಲಕ ಹಸ್ತಾಂತರಿಸಿದ ಉದ್ಯಮಿ ಅಶೋಕ್ ಕುಮಾರ್ ರೈ ಬಳಿಕ ಮಾತನಾಡಿ, ಪ್ರಸ್ತುತ ಇದು 94 ಹಗೂ 95ನೇ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ಈ ಹಿಂದೆ 93 ಕುಟುಂಬಗಳಿಗೆ ಮನೆ ಹಸ್ತಾಂತರಿಸಲಾಗಿದೆ. ಇನ್ನೂ ಕೆಲವೊಂದು ಮನೆ ನಿರ್ಮಾಣದ ಹಂತದಲ್ಲಿದೆ. ಈ ಮೂಲಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳೀಗೆ ವಾಸಿಸಲು ಯೋಗ್ಯವಾದ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದೇನೆ. ಬಡವರ ಕಣ್ಣೀರೊರೆಸುವ ಮೂಲಕ ನನ್ನಿಂದಾದ ಅಲ್ಪ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದೇನೆ. ಇದರಿಂದಾಗಿ ನನಗೆ ಆತ್ಮತೃಪ್ತಿ ಇದೆ ಎಂದರು.

ಈ ಸಂದರ್ಭದಲ್ಲಿ ಮನೆಯ ಯಜಮಾನರಾದ ಬಾಬು ರೈ ದಂಪತಿ, ಕೌಡಿಚ್ಚಾರ್ ಅಶೋಕ್ ರೈ ಅಭಿಮಾನಿ ಬಳಗದ ಜನಾರ್ದನ ಪೂಜಾರಿ, ಅನಿಲ್ ಕೌಡಿಚ್ಚಾರ್, ಪ್ರಕಾಶ್ ಕೊಯಿಲ, ರಾಜೇಶ್ ಪ್ರಸಾದ್, ಪ್ರಕಾಶ್ ರೈ ಕೊಯ್ಲ, ಲಿಂಗಪ್ಪ ಗೌಡ, ಪ್ರಜ್ವಲ್ ರೈ ಪಾತಾಜೆ, ಜಗದೀಶ್ ಗೌಡ, ಪ್ರವೀಣ್ ಪಾಟಾಳಿ, ಪ್ರದೀಪ್ ಪಾಟಾಳಿ, ಶರತ್‍ರಾಜ್ ಮತ್ತಿತರರು ಉಪಸ್ಥಿತರಿದ್ದರು. ರೈ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಚೇರಿಯ ಲಿಂಗಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.