Home ದಕ್ಷಿಣ ಕನ್ನಡ ಅನ್ಯಧರ್ಮದ ಯುವಕ- ಹಿಂದು ಯುವತಿ ಅಸಭ್ಯ ವರ್ತನೆ | ಪ್ರಶ್ನಿಸಿದ ನಾಲ್ವರನ್ನು ಸುಮೊಟೋ ಕೇಸ್ ದಾಖಲಿಸಿ...

ಅನ್ಯಧರ್ಮದ ಯುವಕ- ಹಿಂದು ಯುವತಿ ಅಸಭ್ಯ ವರ್ತನೆ | ಪ್ರಶ್ನಿಸಿದ ನಾಲ್ವರನ್ನು ಸುಮೊಟೋ ಕೇಸ್ ದಾಖಲಿಸಿ ಬಂಧನ, ಬಿಜೆಪಿ ಜನಪ್ರತಿನಿಧಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಅನ್ಯಕೋಮಿನ ಜೋಡಿಯನ್ನು ತಡೆದು ಪ್ರಶ್ನಿಸಿದ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ ವಿಚಾರ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕರಾವಳಿಯ ರಾಜಕಾರಣಿಗಳಿಗೆ ಧಮ್ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನ್ಯ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲರೇ, ನಿಮಗೆ ತಾಕತ್ತಿಲ್ಲವಾದರೆ ರಾಜೀನಾಮೆ ಕೊಟ್ಟು ಬಿಡಿ. ಇಲ್ಲಿ ಹಿಂದುಸಮಾಜಕ್ಕಾಗಿ ದುಡಿಯುವ ಹಿಂದೂ ಕಾರ್ಯಕರ್ತರು ಈ ಪೋಲೀಸರ ಕಿರುಕುಳದಿಂದ ಒಡೆದುಹೋಗುತಿದ್ದಾರೆ. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದ ಅಲ್ಲ. ಕಾರ್ಯಕರ್ತರನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ. ಹಿಂದೂ ಹುಡುಗ್ರು ಸಮಾ ಚಾಟಿ ಬೀಸುತ್ತಿದ್ದಾರೆ. ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಯನ್ನು ಪ್ರಶ್ನಿಸಿದ್ದು ಹೇಗೆ ತಪ್ಪಾಗುತ್ತದೆ. ಪೋಲೀಸರು ಅದು ಹೇಗೆ ಸಮಾಜದಲ್ಲಿ ಅನೈತಿಕ ಚಟುವಟಿಕೆ ನಡೆಸಿದ ಜೋಡಿಯನ್ನು ತಡೆದವರನ್ನು ಬಂಧಿಸುತ್ತಾರೆ ? ಹಾಗೆ ಬಂಧಿಸಲು ಕುಮ್ಮಕ್ಕು ನೀಡಿದ್ದು ಯಾರು ? ಒಂದು ವೇಳೆ ಪೋಲೀಸರು ವಿನಾಕಾರಣ ಇಂತಹಾ ನಿರ್ಧಾರ ಕೈಗೊಳ್ಳುತ್ತಾರೆ ಎಂದಾದರೆ, ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಹಿಂದುತ್ವದ ಓಟಿನ ಭಿಕ್ಷೆಯನ್ನು ಜೇಬಿಗೆ ಹಾಕಿಕೊಂಡು ಗೆದ್ದ ಶಾಸಕರು ಏನಕ್ಕೆ ಇರುವುದು – ಗೆಣಸು ತರಿಯಾಕಾ ? ಈ ವಿಶ್ವಾಸದ್ರೋಹದ ಬಿಜೆಪಿಗಿಂತ ಬೇರೆಯವರೇ ವಾಸಿ. ಇಂತಹಾ ಮೆಸೇಜ್ ಗಳ ಮಹಾಪೂರದಿಂದ ಹಿಂದುತ್ವದ ಗ್ರೂಪುಗಳು ಇವತ್ತು ತುಂಬಿ ತುಳುಕುತ್ತಿವೆ.

ಆತ್ತ ಪೊಲೀಸರ ಮೇಲೆ ಕೂಡಾ ಸೋಷಿಯಲ್ ಮೀಡಿಯಾ ಮುಗಿಬಿದ್ದು ಬಿಟ್ಟಿವೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸಮಾಜ ಸುಧಾರಕನಂತೆ ಫೋಸ್ ಕೊಟ್ಟು ಒಂದು ವರ್ಗದ ಓಲೈಕೆಗೆ ಹೊರಟಿದ್ದಾರೆ. ಇತ್ಯಾದಿ ಒಕ್ಕಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ ಹಿಂದೂ ಸಮಾಜದ ಹುಡುಗರು.