Home ದಕ್ಷಿಣ ಕನ್ನಡ ಭೂಗತ ಪಾತಕಿಗಳಿಂದ ಹತ್ಯೆ ಸಂಚು!! ಮಂಗಳೂರು ಕಮಿಷನರ್ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ

ಭೂಗತ ಪಾತಕಿಗಳಿಂದ ಹತ್ಯೆ ಸಂಚು!! ಮಂಗಳೂರು ಕಮಿಷನರ್ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದು, ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಈ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈ ಪ್ರಕರಣವನ್ನು ಮಂಗಳೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್‌ ಕಮಿಷನರ್‌ ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅವರು ತನಿಖೆಗೆ ಅಗತ್ಯವಿರುವ ಕೆಲವು ಮಾಹಿತಿಗಳನ್ನು ನನ್ನಿಂದ ಪಡೆದುಕೊಂಡರು’ ಎಂದು ತಿಳಿಸಿದರು.

ಇನ್ನು, ತನಗೆ ಜೀವ ಬೆದರಿಕೆ ಇದೆ ಎಂದು ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಗೃಹ ಸಚಿವರ ಬಳಿ ಹೋಗಿ ಮನವಿ ಸಲ್ಲಿಸಿದ್ದರು. ಹೀಗಾಗಿ ಎಡಿಜಿಪಿಯವರು ನಮಗೆ ಈ ಕುರಿತು ಮಾಹಿತಿ ನೀಡಿದ್ದರು. ಆದರೆ, ಅವರು ಕೊಟ್ಟ ಮನವಿಯಲ್ಲಿ ನಿರ್ದಿಷ್ಟ ‌ಮಾಹಿತಿ ಇರಲಿಲ್ಲ.

ಯಾರಿಂದ ಬೆದರಿಕೆ ಇದೆ, ಯಾತಕ್ಕಾಗಿ ಬೆದರಿಕೆ ಇದೆ ಎಂದು ಹೇಳಿರಲಿಲ್ಲ. ಆದರೆ, ಅವರ ರಿಲೈಬಲ್ ಸೋರ್ಸ್ ಮೂಲಕ ಬಂದ ಮಾಹಿತಿಯಂತೆ ಅವರು ದೂರು ಕೊಟ್ಟಿದ್ರು. ಅವರು ಯಾರೂಂತ ಪತ್ತೆ ಹಚ್ಚಬೇಕು, ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಅವರನ್ನು ಹೆಚ್ಚಿನ ಮಾಹಿತಿಗಾಗಿ ಇಂದು ವಿಚಾರಣೆಗೆ ಕರೆದಿದ್ದೀವಿ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ಹೇಳಿದರು.