Home ದಕ್ಷಿಣ ಕನ್ನಡ ಧರ್ಮಸ್ಥಳ: ಪಾದಯಾತ್ರೆ ಬಂದಿದ್ದ ಯಾತ್ರಾರ್ಥಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

ಧರ್ಮಸ್ಥಳ: ಪಾದಯಾತ್ರೆ ಬಂದಿದ್ದ ಯಾತ್ರಾರ್ಥಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Hindu neighbor gifts plot of land

Hindu neighbour gifts land to Muslim journalist

ಮಹಾ ಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಿಕ್ಕಮಗಳೂರಿನಿಂದ ಪಾದಯಾತ್ರೆ ಬಂದ ವ್ಯಕ್ತಿಯೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಚಂದ್ರಶೇಖರ್ ತನ್ನ ಸ್ನೇಹಿತನಾದ ವೆಂಕಟೇಶ್ ಜೊತೆ ಧರ್ಮಸ್ಥಳಕ್ಕೆ ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮಾಡಿಕೊಂಡು ಇಂದು ಧರ್ಮಸ್ಥಳ ನೇತ್ರಾವತಿಗೆ ಬಂದಿದ್ದರು. ಈ ವೇಳೆ ಸ್ನಾನ ಮಾಡಲು ನದಿಗೆ ಇಳಿದಿದ್ದು, ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದ್ದು, ಘಟನೆಯ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.