Home ದಕ್ಷಿಣ ಕನ್ನಡ snake bite: ಹ್ಯಾಟ್ಸಾಫ್ ಮಗಳೇ..! ತಾಯಿ ಕಾಲಿನಿಂದ ಕಚ್ಚಿ ಹಾವಿನ ವಿಷ ತೆಗೆದ ಮಗಳು :...

snake bite: ಹ್ಯಾಟ್ಸಾಫ್ ಮಗಳೇ..! ತಾಯಿ ಕಾಲಿನಿಂದ ಕಚ್ಚಿ ಹಾವಿನ ವಿಷ ತೆಗೆದ ಮಗಳು : ಭಾರೀ ಮೆಚ್ಚುಗೆ ವ್ಯಕ್ತ

Snake bite

Hindu neighbor gifts plot of land

Hindu neighbour gifts land to Muslim journalist

snake bite: ಹಾವು ಎಂದರೆ ಯಾರಿಗೆ ತಾನೆ ಭಯ ಆಗೋದಿಲ್ಲ ಹೇಳಿ, ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳು ಎಂದು ನಂಬಲಾಗಿದೆ. ಅದರಲ್ಲಿ ಮುಖ್ಯವಾಗಿ ಹಾವುಗಳು ಮನುಷ್ಯರನ್ನು ಕಚ್ಚುತ್ತವೆ ಇದೀಗ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಪುತ್ತೂರು ತಾಲೂಕಿನ ಮಾಡಾವು ಎಂಬ ಗ್ರಾಮದಲ್ಲಿ ಅಮ್ಮನಿಗೆ ನಾಗರಹಾವೊಂದು ಕಚ್ಚಿದ್ದ ವೇಳೆ ಜೀವಕ್ಕಾಗಿ ಮಗಳೊಬ್ಬಳು ಪ್ರಾಣದ ಹಂಗು ತೊರೆದು ಕಾಪಾಡಿದ ಘಟನೆಯೊಂದು ನಡೆದಿದೆ.

ಕೆಯ್ಯೂರು ಗ್ರಾಮ ಪಂಚಾಯತ್‌ ಸಮಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ವೇಲೆ ಆಕಸ್ಮಿಕವಾಗಿ ನಾಗರ ಹಾವೊಂದು (snake bite) ಕಡಿದಿದೆ. ಅಮ್ಮನ ಅಳುತ್ತಿದ್ದ ಶಬ್ಧ ಕೇಳಿ ಓಡೋಡಿ ಹೋಗಿ ಮಗಳು ಶ್ರಮ್ಯ ಧೈರ್ಯ ತುಂಬಿ ಕೊಂಚವೂ ಭಯಪಡದೆ ಹಾವು ಕಚ್ಚಿದ ದೇಹದ ಭಾಗದಿಂದ ಬಾಯಿಯಿಂದ ಕಚ್ಚಿ ವಿಷವನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿ ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಬಳಿಕ ಸ್ಥಳೀಯ ಆಸ್ಪತ್ರೆ ತಾಯಿಯನ್ನು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಯಿತು. ಇದೀಗ ಕೊಂಚ ಮಮತಾ ರೈ ಚೇತರಿಸಿಕೊಂಡಿದ್ದಾರೆ. ಈಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋವರ್ಸ್‌ ಆಂಡ್‌ ರೇಂಜರ್ ವಿದ್ಯಾರ್ಥಿನಿಯೂ ಆಗಿದ್ದರು ಅಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ತಾಯಿಯ ಪ್ರಾಣವನ್ನು ರಕ್ಷಿಸಿದ್ದಾರೆ.

ಶ್ರಮ್ಯ ರೈ ಧೈರ್ಯವನ್ನು ಗ್ರಾಮಸ್ಥರು , ಸೇರಿದಂತೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಆರೋಗ್ಯ ವಿಚಾರಿಸಿದಲ್ಲದೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೀಗ ಕರಾವಳಿ ಭಾಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಆಕೆಯದ್ದೇ ಸುದ್ದಿ ಹರಿದಾಡುತ್ತಿದ್ದು ಭಾರೀ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ.