Home ದಕ್ಷಿಣ ಕನ್ನಡ Dakshina Kannada: ವಿದ್ಯಾರ್ಥಿನಿ ಜತೆ ಮಾತನಾಡಿದಕ್ಕೆ ಯುವಕನಿಗೆ ಹಲ್ಲೆ ,ಮೂವರ ಬಂಧನ

Dakshina Kannada: ವಿದ್ಯಾರ್ಥಿನಿ ಜತೆ ಮಾತನಾಡಿದಕ್ಕೆ ಯುವಕನಿಗೆ ಹಲ್ಲೆ ,ಮೂವರ ಬಂಧನ

Dakshina Kannada

Hindu neighbor gifts plot of land

Hindu neighbour gifts land to Muslim journalist

Dakshina Kannada : ಬೆಂಗಳೂರು ಬಸ್‌ ಹತ್ತಲು ಬಂದಿದ್ದ ಯುವತಿಯ ಜೊತೆಗೆ ಅನ್ಯಕೋಮಿನ ಯುವಕ ಮಾತನಾಡಿದ ಎಂಬ ಕಾರಣಕ್ಕೆ ಮೂವರು ಯುವಕರ ತಂಡ ವಿದ್ಯಾರ್ಥಿಗೆ(Students )ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು(Police)ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ( Dakshina Kannada) ಮತ್ತೊಂದು ನೈತಿಕ ಪೊಲೀಸ್‌ ಗಿರಿ (Moral Policing) ಪ್ರಕರಣ ನಡೆದಿರುವ ಕುರಿತು ವರದಿಯಾಗಿದೆ. ಹಿಂದು ವಿದ್ಯಾರ್ಥಿನಿಯೊಬ್ಬಳ (Hindu girl student) ಜತೆ ಮಾತನಾಡಿದ ಎಂಬ ಕಾರಣಕ್ಕೆ ಯುವಕರು ಮುಸ್ಲಿಂ ಯುವಕನ (Attack on Muslim youth) ಮೇಲೆ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಪೊಲೀಸರು ಘಟನೆ ನಡೆದ ಕೂಡಲೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಡಬಿದ್ರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ಆಗಸ್ಟ್‌ 22ರಂದು ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂಡುಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದಿದ್ದಾಳೆ. ಅದೇ ಸಮಯಕ್ಕೆ ಕೋಟೆಬಾಗಿಲು ಸಮೀಪದ ವಿದ್ಯಾರ್ಥಿಯೊಬ್ಬ ಹುಡುಗಿಯೊಂದಿಗೆ ಮಾತನಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯ ಕೆಲವರು ಯುವಕರು ಉಳಿದವರಿಗೆ ಮಾಹಿತಿ ನೀಡಿದ್ದು, ಯುವತಿ ಬಸ್‌ ಹತ್ತುತ್ತಿದ್ದಂತೆ ಯುವಕರ ತಂಡವೊಂದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದೆ.

ಹಿಂದು ಯುವತಿಯ ಜೊತೆಗೆ ನಿನಗೇನು ಕೆಲಸ ಎಂದು ಪ್ರಶ್ನಿಸಿ ಯುವಕರ ತಂಡ ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಘಟನೆ ನಡೆದ ದಿನವೇ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಮೂಡಬಿದ್ರೆಯ (Moral Policing at Moodabidri) ರಾಜೀವ್‌ ಗಾಂಧಿ ಸಂಕೀರ್ಣದ ಎದುರು ನಡೆದ ಘಟನೆಯ ಕುರಿತಂತೆ ಅಭಿಲಾಷ್, ಪ್ರೇಮ್ ಭಂಡಾರಿ ಮತ್ತು ಸಂಜಯ್ ಎಂಬ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನೂ ಓದಿ: 42 ರ ಆಂಟಿಯ ಜೊತೆ 25ವರ್ಷದ ಯುವಕನ ಸಲುಗೆ! ಆಂಟಿ ಸಾವು, ಯುವಕ ಜೈಲುಪಾಲು!! ಅಷ್ಟಕ್ಕೂ ನಡೆದದ್ದೇನು?