Home ದಕ್ಷಿಣ ಕನ್ನಡ Pervert Husband: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಗಂಡನ ಒತ್ತಾಯ! ಕೋಪಗೊಂಡ ಹೆಂಡತಿ ಮಾಡಿದ್ದೇನು ಗೊತ್ತೇ???

Pervert Husband: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಗಂಡನ ಒತ್ತಾಯ! ಕೋಪಗೊಂಡ ಹೆಂಡತಿ ಮಾಡಿದ್ದೇನು ಗೊತ್ತೇ???

Pervert Husband

Hindu neighbor gifts plot of land

Hindu neighbour gifts land to Muslim journalist

Pervert Husband: ತನ್ನ ಗೆಳೆಯರ ಜೊತೆಗೆ ಮಲಗಲು ಒತ್ತಾಯಿಸಿದ ವಿಕೃತ ಪತಿಯ(Pervert Husband) ವಿರುದ್ದ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ಮಂಗಳೂರು ಮೂಲದವನಾದ ಸುಧೀರ್ ಪೈ ಎಂಬ ವ್ಯಕ್ತಿ ಸ್ನೇಹಿತರ ಜೊತೆಯೇ ಖಾಸಗಿ ಕ್ಷಣ ಕಳೆಯಲು ಪತ್ನಿಗೆ ಒತ್ತಾಯಿಸಿದ್ದು, ಪತಿಯ ವಿಕೃತ ನಡೆಯಿಂದ(Pervert Husband) ಬೇಸತ್ತ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಧೀರ್ ಪೈ ಎಂಬ ವಿಕೃತ ಪತಿ ವಿರುದ್ಧ ಪತ್ನಿ ಶ್ರೇಯಾ ಪೈ ದೂರು ನೀಡಿದ್ದು, ಈತ ಪತ್ನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ನಡುವೆ ಗಂಡನ ವಾಟ್ಸ್ಯಾಪ್ ಚೆಕ್ ಮಾಡಿದ ಸಂದರ್ಭ ಅನೇಕ ಅಶ್ಲೀಲ ಸಂದೇಶಗಳು ಮತ್ತು ಲೈಂಗಿಕ ಕಾರ್ಯಕರ್ತೆಯರ ದರದ ಬಗ್ಗೆ ಸಂದೇಶಗಳು ಕಂಡುಬಂದಿದೆ. ಇದನ್ನು ಪ್ರಶ್ನಿಸಿದಾಗ ಭೂಪ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಮೂರು ಜನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಸುಧೀರ್ ಪತ್ನಿಗೆ ಒತ್ತಾಯ ಮಾಡಿ ಒತ್ತಡ ಹಾಕುತ್ತಿದ್ದ. ಪತ್ನಿ ಇದಕ್ಕೆ ನಕಾರ ಧೋರಣೆ ತೋರಿದ್ದು, ಹೀಗಾಗಿ, ಸುಧೀರ್‌ ಆಕೆಯ ಮೇಲೆ ಹಲ್ಲೆ ನಡೆಸಿದ್ದು ಜೊತೆಗೆ ಸ್ನೇಹಿತರನ್ನು ಕರೆತಂದು ಬಲಪ್ರಯೋಗಕ್ಕೂ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ಮನ ನೊಂದ ಪತ್ನಿ ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Government employee: NPS ರದ್ದು, 7ನೇ ವೇತನ ಆಯೋಗದ ಕುರಿತು ಬಂತು ಬಿಗ್ ಅಪ್ಡೇಟ್- ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ