Home ದಕ್ಷಿಣ ಕನ್ನಡ Mangalore university: ಗಣೇಶೋತ್ಸವ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯ !! ABVP ಸಂಘಟನೆಯಿಂದ...

Mangalore university: ಗಣೇಶೋತ್ಸವ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯ !! ABVP ಸಂಘಟನೆಯಿಂದ ಕಾಲೇಜು ಮುತ್ತಿಗೆ

Hindu neighbor gifts plot of land

Hindu neighbour gifts land to Muslim journalist

Mangalore university: ಮಂಗಳೂರು ವಿಶ್ವವಿದ್ಯಾಲಯದಲ್ಲಿ(Mangalore university) ಗಣೇಶೋತ್ಸವ ಆಚರಣೆಗೆ ಕುಲಪತಿಗಳು ಒಪ್ಪಿಗೆ ನೀಡಿರುವ ಕುರಿತು ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ವಿವಿಯಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ.

ಹೌದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆವ ಕಾರ್ಯಕ್ರಮವೊಂದಕ್ಕೆ ಹೊಸದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ, ಸಂಶೋಧಕ, ಲೇಖಕ ಹಾಗೂ ಜನಕಲಾ ಸಂಘಟಕ ಡಾ.ಶಂಸುಲ್ ಇಸ್ಲಾಂ(Dr. Shamsul Islam) ಅವರು ಆಗಮಿಸುತ್ತಿದ್ದು, ಅವರ ಉಪನ್ಯಾಸಕ್ಕೆ ಎಬಿವಿಪಿ(ABVP) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಡಾ. ಶಂಸುಲ್ ಇಸ್ಲಾಂ ಅವರು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 – ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದು, ಎಬಿವಿಪಿ ಕಾರ್ಯಕರ್ತರು ‘ಗೋಬ್ಯಾಕ್ ಶಂಸುಲ್’ ಎಂದು‌ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಂಸುಲ್ ಇಸ್ಲಾಂ ಉಪನ್ಯಾಸ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.