Home ದಕ್ಷಿಣ ಕನ್ನಡ Alwas College: ಆಳ್ವಾಸ್ ಕಾಲೇಜಿನಲ್ಲಿ ಮುಂದುವರಿದ ಆತ್ಮಹತ್ಯೆ ಸರಪಳಿ, ಹಾಸ್ಟೆಲ್ ವಿದ್ಯಾರ್ಥಿ ಆತ್ಮಹತ್ಯೆ

Alwas College: ಆಳ್ವಾಸ್ ಕಾಲೇಜಿನಲ್ಲಿ ಮುಂದುವರಿದ ಆತ್ಮಹತ್ಯೆ ಸರಪಳಿ, ಹಾಸ್ಟೆಲ್ ವಿದ್ಯಾರ್ಥಿ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

Alwas College: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ಹಾಸ್ಟೆಲ್ನಲ್ಲಿ ಓರ್ವ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಸಂಜಯ್ ಭುವನ್ (16) ಮೃತ ದುರ್ದೈವಿ. ಆತ ತಾನು ವಾಸ ಇರುವ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಎರಡು ದಿನಗಳ ಹಿಂದೆ ಮಾರ್ಚ್ 12 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರಾತ್ರಿ ಫೋನ್ ಮಾಡಿ ಬಾ ಅಂತಿದ್ರು, ಮಂಚ ಹತ್ತು ಅಂದ್ರು; ಆ ದಿನ ಹರಿದ ಬಟ್ಟೆಯಲ್ಲೇ ರಸ್ತೆಯಲ್ಲಿ ಬಿದ್ದಿದ್ದೆ, ಭಯಾನಕ ಸತ್ಯ ಬಿಚ್ಚಿಟ್ಟ ನಟಿ ಕಿರಣ್ ರಾಥೋಡ್ !

ಘಟನೆ ತಿಳಿದ ನಂತರ NSUI ನ ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಕಾಲೇಜಿಗೆ ಮುತ್ತಿಗೆ ಹಾಕಲಾಯಿತು. ಆಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಕಾಲೇಜು ಬಳಿ ಭದ್ರತೆ ಒದಗಿಸಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಷ್ಪಕ್ಷಪಾತ ತನಿಖೆ ಮಾಡುವಂತೆ ಪೊಲೀಸರಿಗೆ ವಿದ್ಯಾರ್ಥಿ ಸಂಘಟನೆ ಆಗ್ರಹ ಮಾಡಿದೆ.

ಇದನ್ನೂ ಓದಿ: K.S.Ishwarappa: ಶಿವಮೊಗ್ಗದಲ್ಲಿ ಎದ್ದು ನಿಂತ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆಗೆ ನಿರ್ಧಾರ, ಕುತೂಹಲ ಮೂಡಿಸಿದ ತ್ರಿಕೋನ ಸ್ಪರ್ಧೆ!