Home ದಕ್ಷಿಣ ಕನ್ನಡ Malpe: ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ – ಐವರ ಸ್ಥಿತಿ ಗಂಭೀರ!!

Malpe: ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ – ಐವರ ಸ್ಥಿತಿ ಗಂಭೀರ!!

Hindu neighbor gifts plot of land

Hindu neighbour gifts land to Muslim journalist

Malpe: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲಿ ಉಡುಪಿಯ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ಬಾಂಬ್‌ ಸ್ಫೋಟಗೊಂಡು ಐವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಹೌದು, ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಕುಳಿತಿದ್ದ ಮೀನುಗಾರರಿಗೆ ಒಮ್ಮೆಲೆ ದೊಡ್ಡ ಸದ್ದು ಕೇಳಿಸಿತು. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡಿದರು. ತತ್‌ಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಗಾಯಗೊಂಡ ಐವರು ಮೀನುಗಾರರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದರ ಹಿಂದಿನ ಅಸಲಿ ಎತ್ತು ಬೇರೆ ಇದೆ.

ಯಸ್, ಇದು ನಿಜ ಘಟನೆ ಅಲ್ಲ. ಸಂಭಾವ್ಯ ಆತಂಕದ ಹಿನ್ನೆಲೆಯಲ್ಲಿ ನಡೆದ ಅಣಕು ಪ್ರದರ್ಶನವಷ್ಟೆ. ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಅಗ್ನಿಶಾಮಕ ದಳ, ಕಸ್ಟಮ್ಸ್‌ ವತಿಯಿಂದ ಜಂಟಿಯಾಗಿ ಮಲ್ಪೆ ಬಂದರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಈ ಅಣಕು ಪ್ರದರ್ಶನವನ್ನು ಅಗ್ನಿಶಾಮಕ -ಪೊಲೀಸ್ ಇಲಾಖೆ ಸಾರ್ವಜನಿಕರ ಮುಂದೆ ಯಶಸ್ವಿಯಾಗಿ ತೋರಿಸಿ, ಅನಿರೀಕ್ಷಿತ ಯುದ್ಧದಂತಹ ಸಂದರ್ಭ ನಿಭಾಯಿಸಲು ಹೇಗೆ ಸನ್ನದ್ಧರಾಗಿದ್ದೇವೆ ಎಂದು ತೋರಿಸಿದರು. ಅನಂತರ ಕರಾವಳಿ ಕಾವಲು ಪಡೆಯ ಎಸ್‌ಪಿ ಮಿಥುನ್‌ ಹಾಗೂ ಅಧಿಕಾರಿಗಳು ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.