Home ದಕ್ಷಿಣ ಕನ್ನಡ ದಕ್ಷಿಣ ಕನ್ನಡದ ಪ್ರಭಾವಿ ಶಾಸಕನ ಕಾರಿನಲ್ಲಿ ಹಾರಾಡುತ್ತಿದೆ ಭಗವಧ್ವಜ

ದಕ್ಷಿಣ ಕನ್ನಡದ ಪ್ರಭಾವಿ ಶಾಸಕನ ಕಾರಿನಲ್ಲಿ ಹಾರಾಡುತ್ತಿದೆ ಭಗವಧ್ವಜ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕರಾವಳಿ ಭಾಗದ ಯುವ ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ತಾವು ಹಿಂದುತ್ವವಾದಿಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಹರೀಶ್ ಪೂಂಜಾ ಅವರ ಕಾರಿನಲ್ಲಿ ಭಗವಧ್ವಜ ಹಾರಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಾಸಕರ ಕಾರಿನಲ್ಲಿ ಭಗವಧ್ವಜ ಕಂಡು ಪ್ರೇರಿತರಾಗಿ ಕಾರ್ಯಕರ್ತರು ಕೂಡಾ, ತಮ್ಮ ತಮ್ಮ ವಾಹನಗಳಿಗೆ ಭಗವದ್ವಜವನ್ನು ಹಾಕಲು ಮುಂದಾಗಿದ್ದಾರೆ. ಶಾಸಕರ ಕಾರಿನ ಚಿತ್ರಣವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮ ಪಡುತ್ತಿದ್ದಾರೆ.

ಹಿಂದೂ ಸಂಘಟನೆಗಳ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹರೀಶ್ ಪೂಂಜಾ, ಚುನಾವಣೆಗೆ ಮುನ್ನವೇ ಜನರ ಸಂಪರ್ಕದಲ್ಲಿದ್ದವರು. ಹಾಗಾಗಿ ರಾಜಕೀಯಕ್ಕಿಂತ ಹಿಂದುತ್ವ ಮೊದಲು ಎಂಬ ಮಾತಿನ್ನು ಅಧಿಕಾರಕ್ಕೆ ಬಂದ ಬಳಿಕವೂ ಬೆಳ್ತಂಗಡಿ ಶಾಸಕರು ಸಾಬೀತುಪಡಿಸಿದ್ದಾರೆ ಎನ್ನುವುದು ಅವರ ಕಾರ್ಯಕರ್ತರ ನಂಬಿಕೆ. ಕಾರ್ಯಕರ್ತರನ್ನು ಎಂಗೇಜ್ ಮಾಡುವ ಕಲೆ ಹರೀಶ್ ಪೂಂಜರಿಗೆ ಕರಗತ. ಆತ ಅದರಲ್ಲಿ ಪಂಡಿತ ಬೇರೆ. ಹಿಂದೂ ಕಾರ್ಯಕರ್ತರೇ ಹರೀಶ್ ಪೂಂಜಾರ ಚುನಾವಣಾ ರಾಜಕೀಯದ ಕಾರ್ಯಕರ್ತರು. ಆ ಕಾರ್ಯಕರ್ತರನ್ನು ಮೆಚ್ಚಿಸಲು ಇದೀಗ ಭಗವದ್ವಜವನ್ನು ತಮ್ಮ ಕಾರಿಗೆ ಹೂಡಿದ್ದಾರೆ ಹರೀಶ್ ಪೂಂಜಾ. ಅವರನ್ನು ನಾಯಕನೆಂದು ಆರಾಧಿಸುತ್ತಿರುವ ಕಾರ್ಯಕರ್ತ ಖುಷಿ ಆಗದೆ ಇರಲು ಕಾರಣಗಳೇ ಇಲ್ಲ.

ಸೆಪ್ಟೆಂಬರ್ 2 ನೇ ತಾರೀಖಿಗೆ ಮಂಗಳೂರಿಗೆ ಪ್ರಧಾನಿ ಮೋದಿ ಬರ್ತಿದ್ದಾರೆ. ಆ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರ ದಂಡಿನೊಂದಿಗೆ ಭಗವಾಧ್ವಜ ಸಮೇತ ಮಂಗಳೂರಿಗೆ ಮಾರ್ಚ್ ಮಾಡೋದು ಪೂಂಜಾ ಪ್ಲಾನ್ ಇರಲೂಬಹುದು ಎನ್ನಲಾಗಿದೆ.