Home ದಕ್ಷಿಣ ಕನ್ನಡ ಬೆಳ್ತಂಗಡಿ | ಹಿಂದೂ ಯುವತಿಯರು ಹಾಗೂ ಮುಸ್ಲಿಂ ಯುವಕ ಲಾಡ್ಜ್ ಗೆ ಹೋಗಲು ವಿಫಲ ಯತ್ನ,...

ಬೆಳ್ತಂಗಡಿ | ಹಿಂದೂ ಯುವತಿಯರು ಹಾಗೂ ಮುಸ್ಲಿಂ ಯುವಕ ಲಾಡ್ಜ್ ಗೆ ಹೋಗಲು ವಿಫಲ ಯತ್ನ, ನೇತ್ರಾವತಿ ಸ್ನಾನ ಘಟ್ಟದಲ್ಲಿ ಹುಡುಗಿಯರು ಸ್ನಾನ ಮಾಡುವಾಗ ಇಣುಕಿ ನೋಡಿದ ಯುವಕ ?!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಮತಿಯ ಜೋಡಿಗಳು ಹೆಚ್ಚಾಗಿ ಬರುತ್ತಿರುವುದು ಕಂಡುಬರುತ್ತಿದೆ. ಯಾವುದೋ ಉದ್ಯೋಗ ಸಂಸ್ಥೆಯಲ್ಲಿ ಯುವತಿಯರು ಯುವಕರು ಕೆಲಸವನ್ನು ಮಾಡುತ್ತಿದ್ದು, ರಜೆಯ ನಿಮಿತ್ತ ಅನ್ಯ ಮತಿಯರೊಂದಿಗೆ ಯುವತಿಯರು ಸುತ್ತಾಟದಲ್ಲಿ ತೊಡಗಿಕೊಂಡಿರುವುದು ಮತ್ತು ಅನೇಕ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ತಿಳಿದು ಬರುತ್ತಿದೆ. ಅಂತಹಾ ಒಂದು ಘಟನೆ ಇಂದು ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಇಂದು ಮುಂಜಾನೆ 11 ಗಂಟೆಯ ವೇಳೆಗೆ ಬೆಂಗಳೂರಿನ ಇಬ್ಬರು ಯುವತಿಯರು ಹಾಗೂ ಓರ್ವ ಮುಸ್ಲಿಂ ಯುವಕ ಕನ್ಯಾಡಿ ಸಮೀಪದ ಲಾಡ್ಜ್ ಗೆ ಬುಕ್ಕಿಂಗ್ ಆಗಿ ಬಂದಿರುತ್ತಾರೆ. ಇವರ ಗುರುತಿನ ಚೀಟಿಯನ್ನು ಅಲ್ಲಿನ ಮ್ಯಾನೇಜರ್ ಕೇಳಿ ಪರಿಶೀಲಿಸಿದಾಗ ಮುಸ್ಲಿಂ ಯುವಕ ಬೆಂಗಳೂರಿನ ರಹೀಂ ಎಂದು ತಿಳಿದುಬಂದಿರುತ್ತದೆ. ಮತ್ತು ಯುವತಿಯರು ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿಗಳು ಎಂದು ತಿಳಿದುಬಂದಿದೆ.
ಯುವಕನು ತಮಗೆ ಒಂದು ರೂಮ್ ನೀಡಿ ಎಂದು ಕೇಳಿದಾಗ ಅಲ್ಲಿಯ ಉದ್ಯೋಗಿಯು ಯಾವುದೇ ರೀತಿಯ ಬ್ಯಾಚುಲರ್ ರೂಮ್ ಇಲ್ಲಿ ನೀಡಲಾಗುವುದಿಲ್ಲ ಎಂದು ಹೇಳಿ ಅವರನ್ನು ಅಲ್ಲಿಂದ ಕಳಿಸಿರುತ್ತಾನೆ.

ತದನಂತರ ಅಲ್ಲಿಂದ ಹೋರಟ ಜೋಡಿಯು, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಬಂದು ಯುವತಿಯರು ಸ್ನಾನ ಮಾಡಲು ಹೊರಟಿದ್ದಾರೆ. ಆಗ ಯುವಕ ಅನುಮಾನಸ್ಪದವಾಗಿ ನೋಡುತ್ತಾ ನಿಂತಿರುವುದು ಅಲ್ಲಿಯ ಸಾರ್ವಜನಿಕರಿಗೆ ಗಮನಕ್ಕೆ ಬಂದಿದೆ. ಆತನನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ್ದಾರೆ.

ಧರ್ಮಸ್ಥಳಕ್ಕೆಯಾಕೆ ಯಾವಾಗ ಬಂದಿದ್ದಾರೆ ಎಂದು ಇನ್ನೂ ತಿಳಿದು ಬಂದಿಲ್ಲ. ಹಿಂದೂ ಹುಡುಗಿಯರನ್ನು ಜತೆಯಲ್ಲಿ ಕಟ್ಟಿಕೊಂಡು ಧರ್ಮಸ್ಥಳಕ್ಕೆ ಬರುತ್ತಿರುವುದು ಇದು ಕಳೆದ 2 ತಿಂಗಳಲ್ಲಿ ಮೂರನೆಯ ಪ್ರಕರಣ. ಇಂತಹಾ ಜಾಲಿ ಟ್ರಿಪ್ ಗಳೇ ಮೊದಲು ಶುರುವಾಗಿ, ನಂತರ ಲವ್ ಜಿಹಾದ್ ಗೆ ಮಾಡಲಾಗುವುದು ಎನ್ನುವುದು ಹಿಂದೂ ಸಂಘಟನೆಯವರ ಆರೋಪ.