Home ದಕ್ಷಿಣ ಕನ್ನಡ ಪುತ್ತೂರು ಬಾರ್‌ನಲ್ಲಿ ವ್ಯಕ್ತಿಗೆ ಹಲ್ಲೆಗೈದು ಹಣ ದೋಚಿದ ಪ್ರಕರಣ,ನಾಲ್ವರ ಬಂಧನ

ಪುತ್ತೂರು ಬಾರ್‌ನಲ್ಲಿ ವ್ಯಕ್ತಿಗೆ ಹಲ್ಲೆಗೈದು ಹಣ ದೋಚಿದ ಪ್ರಕರಣ,ನಾಲ್ವರ ಬಂಧನ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಸ್ನೇಹಿತನಿಗೆ ಫೋನ್ ಕರೆ ಮಾಡಿ ಬೆದರಿಕೆಯೊಡ್ಡಿರುವುದನ್ನು ವಿಚಾರಿಸಿದಾತನಿಗೆ ತಂಡವೊಂದು ಬಾ‌ರಿನೊಳಗೆ ಹಲ್ಲೆ ನಡೆಸಿ, ಹಣ ದೋಚಿರುವ ಆರೋಪ ವ್ಯಕ್ತವಾಗಿದೆ. ಪುತ್ತೂರು ಮುಖ್ಯರಸ್ತೆಯ ಬಾರ್‌ವೊಂದರಲ್ಲಿ ಸೆ.17ರಂದು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದರ್ಬೆ ಚೋಳಮಂಡಲ ಫೈನಾನ್ಸ್‌ನ ನೌಕರ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಅವಿನಾಶ್ (29ವ)ಹಲ್ಲೆಗೊಳಗಾದವರು.
ಆರೋಪಿಗಳಾದ ಪ್ರತಾಪ್,ಜಗದೀಶ್, ಶರತ್ ,ಅಭಿಜಿತ್ ಬಂಧಿತರು.

ಅವಿನಾಶ್‌ರಿಗೆ ಹಲ್ಲೆಗೈದು ಕಿಸೆಯಲ್ಲಿದ್ದ ನಗದನ್ನು ಆರೋಪಿಗಳು ದೋಚಿದ್ದರು ಎನ್ನಲಾಗಿದೆ.ಘಟನೆಯಿಂದ ಅವಿನಾ‌ಶ್ ಅವರ ಕಣ್ಣಿಗೆ ತೀವ್ರ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.