Home ದಕ್ಷಿಣ ಕನ್ನಡ ಬಂಟ್ವಾಳ : ಮರ ಕಡಿಯುವ ವೇಳೆ ಆಕಸ್ಮಿಕವಾಗಿ ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಸಾವು

ಬಂಟ್ವಾಳ : ಮರ ಕಡಿಯುವ ವೇಳೆ ಆಕಸ್ಮಿಕವಾಗಿ ತೆಂಗಿನ ಮರ ಮೈಮೇಲೆ ಬಿದ್ದು ವ್ಯಕ್ತಿ ಸಾವು

Hindu neighbor gifts plot of land

Hindu neighbour gifts land to Muslim journalist

ಮರ ಕಡಿಯುವಾಗ ಆಕಸ್ಮಿಕವಾಗಿ ತೆಂಗಿನ ಮರ ಬಿದ್ದು ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಪೆರ್ಲಾಪು ನಿವಾಸಿ ಸುರೇಶ್ (38) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಸುರೇಶ್ ನೆರೆ ಮನೆಯ ಬೆಂಗದಡಿ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಲಕ್ಷ್ಮಣ ಅವರ ಜೊತೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ತೆಂಗಿನ ಮರ ಕಡಿದು ಅದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೆ ಇದ್ದ ಸತ್ತ ಒಣಗಿದ ತೆಂಗಿನ ಮರ ಆಕಸ್ಮಿಕವಾಗಿ ಸುರೇಶ್ ಅವರ ಮೈಮೇಲೆ ಬಿದ್ದಿದೆ.

ಪರಿಣಾಮ ಸುರೇಶ್ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.