Home Breaking Entertainment News Kannada Mangaluru: ಕುಟುಂಬ ಸಮೇತರಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ಭೇಟಿ!!

Mangaluru: ಕುಟುಂಬ ಸಮೇತರಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ಭೇಟಿ!!

Sri kadri Manjunatha temple
Image source: Zee news

Hindu neighbor gifts plot of land

Hindu neighbour gifts land to Muslim journalist

Kadri Sri Manjunath temple: ಇಲ್ಲಿನ (Mangaluru) ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Kadri Sri Manjunath temple) ನಟಿ ಮಾಲಾಶ್ರೀ (Actress malashri) ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ದಶಕದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ನಟಿ ಮಾಲಾಶ್ರೀ ಅವರು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಾಲಾಶ್ರೀ ಅವರು ಮಗ, ಮಗಳು ಹಾಗೂ ತಾಯಿ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ನಟಿ ಕೊರಗಜ್ಜನ ಕಟ್ಟೆಗೆ ತೆರಳಿ ಅವರ ಮೂಲ ತರವಾಡು ಮನೆ ಮಾಗಣೆದಡಿ ಗುತ್ತಿಗೆ ಹೋಗಿದ್ದರು. ಅದೇ ದಿನ ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಸದ್ಯ ನಟಿ ದೇವಸ್ದಾನಕ್ಕೆ ಭೇಟಿ ನೀಡಿರುವ ಚಿತ್ರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಚಿತ್ರರಂಗದ ಕನಸಿನ ರಾಣಿ, ಲೇಡಿ ರೆಬೆಲ್ ಸ್ಟಾರ್ ಮಾಲಾಶ್ರೀ ಈಗ ಸಿನಿರಂಗದಿಂದ ದೂರವಿದ್ದಾರೆ. ಆದರೆ, ಮಾಲಾಶ್ರೀ ಅವರ ಮಗಳು ರಾಧನಾ ರಾಮ್ (Radhana ram) ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಡಾರ್ ದರ್ಶನ್ (Actor Darshan) ಅಭಿನಯದ, ತರುಣ ಸುದೀರ್ ನಿರ್ದೇಶನದ D56 ಚಿತ್ರದ (D56 movie) ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ

ಇದನ್ನೂ ಓದಿ:Free Bus: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಮೋದನೆ ; ಕಂಡೀಷನ್ಸ್ ಏನು ಗೊತ್ತಿದೆಯೇ?