Home ದಕ್ಷಿಣ ಕನ್ನಡ Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಜೊತೆ ನಟ...

Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಜೊತೆ ನಟ ಸುನೀಲ್‌ ಶೆಟ್ಟಿ ಪರಿವಾರ ಭಾಗಿ

Swami Koragajja

Hindu neighbor gifts plot of land

Hindu neighbour gifts land to Muslim journalist

Swami Koragajja: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಸೇರಿ ಸುನೀಲ್‌ ಶೆಟ್ಟಿ, ಅಹಾನ್‌ ಶೆಟ್ಟಿ, ಆತಿಯಾ ಶೆಟ್ಟಿ, ಕೆ.ಎಲ್‌.ರಾಹುಲ್‌ ಭೇಟಿ ನೀಡಿದ್ದಾರೆ.

Pavitra Gowda: ನಟ ದರ್ಶನ್‌ ನಂತರ ಇದೀಗ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್‌ ನಟ, ತುಳುನಾಡಿನವರೇ ಆದ ಸುನೀಲ್‌ ಶೆಟ್ಟಿ ತಮ್ಮ ಪುತ್ರ, ಪುತ್ರಿ, ಅಳಿಯನ ಜೊತೆ ನಟಿ ಕತ್ರಿನಾ ಕೈಫ್‌ ಕೂಡಾ ಕೊರಗಜ್ಜನ ಸನ್ನಿಧಿಗೆ ಬಂದು ಅಜ್ಜನ ಕೋಲದಲ್ಲಿ ಭಾಗವಹಿಸಿದ್ದಾರೆ.

ಜುಲೈ 14 ರ ಭಾನುವಾರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಕಟ್ಟೆ ಕೋಲ ನಡೆದಿತ್ತು. ಇದರಲ್ಲಿ ಇವರು ಭಾಗವಹಿಸಿದ್ದು, ಹರಕೆ ನೆರವೇರಿಸಿತ್ತು.
ಸಂಜೆ ಆರು ಗಂಟೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್‌ನ ಈ ತಾರೆಯರು ಮಾಧ್ಯಮಗಳಿಗೆ ಮಾಹಿತಿ ನೀಡಬಾರದೆಂದು ಕೊರಗಜ್ಜನ ಕಟ್ಟೆಯ ಕಚೇರಿ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದರೆನ್ನಲಾಗಿದೆ. ಫೋಟೋ ಕೂಡಾ ತೆಗೆಯದಂತೆ ಮನವಿ ಮಾಡಿದ್ದಾರೆ.

ಸಂಪ್ರದಾಯದ ಪ್ರಕಾರ ಕಟ್ಟೆಯೊಳಗೆ ಬೆಳಕಿಲ್ಲದೆ ಕೋಲ ನೆರವೇರಿದ್ದು, ಹೊರಗೆ ನಿಂತಿದ್ದ ಕತ್ರಿನಾ ಸೇರಿ ಉಳಿದವರು ಕೊರಗಜ್ಜನ ಈ ಪುಣ್ಯ ಸೇವೆಯಲ್ಲಿ ಭಾಗಿಯಾದರು.
ಸುನಿಲ್‌ ಶೆಟ್ಟಿ, ಅಹಾನ್‌ ಶೆಟ್ಟಿ, ಕೆ.ಎಲ್‌ ರಾಹುಲ್‌, ಅತಿಯಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್‌, ವಿ.ಎಂ.ಕಾಮತ್‌ ಸೇರಿ ಒಟ್ಟು 9 ಮಂದಿಯ ಹರಕೆಯ ಕೋಲವನ್ನು ಕೊರಗಜ್ಜನ ಕಟ್ಟೆಯಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು ಎಂದು ವರದಿಯಾಗಿದೆ.

Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ ಬಾಗಿಲು ಮುಚ್ಚಿದ್ದೇಕೆ? ಒಳಗೆ ಇರುವುದಾದ್ರೂ ಏನು?