Home ದಕ್ಷಿಣ ಕನ್ನಡ ಆಮ್ ಆದ್ಮಿ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ಮೆಗಾ ಸದಸ್ಯತ್ವಅಭಿಯಾನದ ಪೂರ್ವಭಾವಿ ಸಭೆ,ಪದಾಧಿಕಾರಿಗಳ ಆಯ್ಕೆ

ಆಮ್ ಆದ್ಮಿ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ಮೆಗಾ ಸದಸ್ಯತ್ವ
ಅಭಿಯಾನದ ಪೂರ್ವಭಾವಿ ಸಭೆ,ಪದಾಧಿಕಾರಿಗಳ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಆಮ್ ಆದ್ಮಿ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ಮೆಗಾ ಸದಸ್ಯತ್ವ
ಅಭಿಯಾನದ ಪೂರ್ವಭಾವಿ ಸಭೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು 16 ಜುಲೈ 2022 ರಂದು ಸಂಜೆ 4:30ಕ್ಕೆ ಅಶ್ವಿನಿ ಹೋಟೆಲ್ ದರ್ಬೆ ಸಭಾಂಗಣ ಪುತ್ತೂರಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಶ್ರೀಧರ ಶೆಟ್ಟಿ ಬೈಲುಗುತ್ತು, ಸಾಮಾಜಿಕ ಹೋರಾಟಗಾರ ಸುದರ್ಶನ್ ಮುರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಅವರನ್ನು ಎಎಪಿ ಪುತ್ತೂರು ಕ್ಷೇತ್ರದ ವಿಧಾನಸಭಾ ಅಧ್ಯಕ್ಷರಾದ ಡಾ. ವಿಶು ಕುಮಾರ್, ಪ್ರಧಾನ ಕಾರ್ಯದರ್ಶಿ ಪುರಷೋತ್ತಮ ಗೌಡ ಕೊಲ್ಪೆ, ಸಂಘಟನಾ ಕಾರ್ಯದರ್ಶಿ ಜನಾರ್ದನ ಬಂಗೇರ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ ಪಕ್ಷದ ಶಾಲು ಹಾಕಿ ಆದರಪುರ್ವಕವಾಗಿ ಪಕ್ಷಕ್ಕೆ ಬರಮಾಡಿಕೊಂಡರು ಮತ್ತು ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.