Home National Tomato Price Down: ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು…

Tomato Price Down: ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು…

Tomato Price Down

Hindu neighbor gifts plot of land

Hindu neighbour gifts land to Muslim journalist

Tomato Price Down: ಗಗನ ಕುಸುಮವಾಗಿದ್ದ ಕೆಂಪು ಸುಂದರಿ ಟೊಮೇಟೊ (Tomato Price Down)ಬೆಲೆ ಇದೀಗ ಕೊಂಚ ಮಟ್ಟಿಗೆ ಇಳಿಕೆ ಕಂಡು ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.

ದಿನಂಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಏಕಏಕಿ ಟೊಮೆಟೋ ಬೆಲೆ ಹೆಚ್ಚಳ ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು. ಈ ನಿಟ್ಟಿನಲ್ಲಿ ರಾಜ್ಯದ ಜನತೆಗೆ ಕೊಂಚ ರಿಲೀಫ್ ನೀಡಲು ಟೊಮೇಟೊ(Tomato Price)ಬೆಲೆ ತಗ್ಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ದೆಹಲಿ-ಎನ್‌ಸಿಆರ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರೈತರ ಸಹಕಾರ ಸಂಸ್ಥೆ (ಎನ್‌ಎಎಫ್‌ಇಡಿ) ಜುಲೈನಿಂದ ಕೆಜಿಗೆ 70 ರಿಂದ 90 ರೂ.ವರೆಗೆ ಚಿಲ್ಲರೆ ದರದಲ್ಲಿ ಟೊಮೆಟೋ ಮಾರಾಟ ಮಾಡುವ ಮೂಲಕ ಟೊಮೇಟೊ ದರ ಇಳಿಕೆಗೆ ಕಾರಣವಾಗಿತ್ತು.

ಪ್ರಸ್ತುತ ಟೊಮೆಟೋ ಬೆಲೆ ದೇಶಾದ್ಯಂತ ಇಳಿಕೆಯಾಗುತ್ತಿದ್ದು, ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು ನಿಧಾನವಾಗಿ ಟೊಮೆಟೋ ಕೊಳ್ಳುವತ್ತ ಮುಖ ಮಾಡಿದ್ದಾರೆ. ಟೊಮೆಟೋ ಬೆಲೆ ಇಳಿಕೆ ಸದ್ಯ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸದ್ಯ ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ದೇಶದ ವಿವಿಧ ಮಾರುಕಟ್ಟೆಗಳಿಗೆ ಟೊಮೆಟೋ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು, ಸೆಪ್ಟೆಂಬರ್ ಆರಂಭದಲ್ಲಿ ಪ್ರಸ್ತುತ ಟೊಮೆಟೋ ಬೆಲೆಯಲ್ಲಿ ಭಾರೀ ಇಳಿಕೆ ಆಗುವ ಸಂಭವ ಹೆಚ್ಚಿದೆ.

ಜುಲೈ 15ರ ಸುಮಾರಿಗೆ ದೇಶದ ಹಲವು ಭಾಗಗಳಲ್ಲಿ ಕೆಜಿಗೆ 250 ರೂ ಇದ್ದ ಟೊಮೆಟೋ ಚಿಲ್ಲರೆ ಬೆಲೆ ಮಾರುಕಟ್ಟೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೋ ಬೆಳೆ ಬಂದಿರುವ ಹಿನ್ನೆಲೆ ಬಹುತೇಕ ನಗರಗಳಲ್ಲಿ ಬೆಲೆ ಕೆಜಿಗೆ 80-120 ರೂಗೆ ಇಳಿಕೆ ಕಂಡಿದೆ. ನ್ಯಾಷನಲ್ ಕಮಾಡಿಟೀಸ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್ (NCML )ವ್ಯವಸ್ಥಾಪಕ ನಿರ್ದೇಶಕರಾಗಿರುವ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಗುಪ್ತಾ ‘ಈ ತಿಂಗಳ ಅಂತ್ಯದಲ್ಲಿ ಪೂರೈಕೆಗೆ ಬೇಡಿಕೆ ಹೆಚ್ಚಾಗಿ ಬೆಲೆಗಳು ಗಣನೀಯವಾಗಿ ಕಡಿಮೆಯಾಗುವ ಸಂಭವದ ಬಗ್ಗೆ ಮಾತನಾಡಿದ್ದಾರೆ. ಸೆಪ್ಟೆಂಬರ್ 15 ರ ವೇಳೆಗೆ ಕೆಜಿಗೆ 30 ರೂ.ಗೆ ತಲುಪುವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಅನುಸಾರ, ದೇಶಾದ್ಯಂತ ಟೊಮೆಟೋ ಸರಾಸರಿ ಬೆಲೆ ಜುಲೈ 14 ರಂದು ಕ್ವಿಂಟಲ್‌ಗೆ ರೂ 9,671 ಇತ್ತು. ಆಗಸ್ಟ್ 14 ರಂದು ಕ್ವಿಂಟಲ್‌ಗೆ ರೂ 9,195 ಕ್ಕೆ ಇಳಿಕೆ ಕಂಡಿದೆ. ಹೆಚ್ಚುವರಿ ಬೆಳೆಯಿಂದಾಗಿ ಅಕ್ಟೋಬರ್ ವೇಳೆಗೆ ಟೊಮೆಟೋ ಬೆಲೆ ಪಾತಾಳಕ್ಕೆ ಇಳಿಯುವ ಸಾಧ್ಯತೆಯಿದೆ. ಅಕ್ಟೋಬರ್ ಮಧ್ಯದ ವೇಳೆಗೆ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 5-10 ರೂ.ಗೆ ಇಳಿಕೆ ಆಗಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gruha Jyothi Scheme: ಫ್ರೀ ಕರೆಂಟ್ ಸಿಗತ್ತೆ ಅಂತ ಬೇಕಾಬಿಟ್ಟಿ ಖರ್ಚು ಮಾಡಿದವರಿಗೆ ಶಾಕ್:
ಬಿಲ್ ಶಾಕ್ ಗೆ ಗ್ರಾಹಕ ಕಂಗಾಲು