Home ಕೃಷಿ Kisan karj mafi Scheme: ರೈತರೇ ನಿಮಗಿದೋ ಭರ್ಜರಿ ಗುಡ್ ನ್ಯೂಸ್- 1 ಲಕ್ಷದಷ್ಟು ಸಾಲ...

Kisan karj mafi Scheme: ರೈತರೇ ನಿಮಗಿದೋ ಭರ್ಜರಿ ಗುಡ್ ನ್ಯೂಸ್- 1 ಲಕ್ಷದಷ್ಟು ಸಾಲ ಮನ್ನಾ ಘೋಷಿಸಿದ ಸರ್ಕಾರ – ಅರ್ಜಿ ಹಾಕಲು ಕ್ಷಣಗಣನೆ ಶುರು !!

Kisan karj mafi Scheme
Image source- Krishi jagran kannada

Hindu neighbor gifts plot of land

Hindu neighbour gifts land to Muslim journalist

Kisan karj mafi Scheme: ಪ್ರತಿ ವರ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆರ್ಥಿಕ ಸಹಾಯ ಮತ್ತು ಆದಾಯವನ್ನು(Income) ಹೆಚ್ಚಿಸಲು ವಿವಿಧ ಯೋಜನೆಗಳನ್ನು ಪ್ರಾರಂಭಿಸುತ್ತವೆ. ಅಂತದರಲ್ಲಿ ಈ ಕಿಸಾನ್ ಕರ್ಜ್ ಮಾಫಿಯಾ ಯೋಜನೆ(Kisan karj mafi Scheme)ಕೂಡ ಒಂದು. ಸದ್ಯ ಈ ಯೋಜನೆಯಡಿಯಲ್ಲಿ ಸರ್ಕಾರವು ರೈತರಿಗೆ ಒಂದು ಲಕ್ಷದಷ್ಟು ಸಾಲ ಮನ್ನಾ ಮಾಡಲು ಮುಂದಾಗಿದೆ.

ಹೌದು, ದೇಶದ ಬೆನ್ನೆಲುಬುಗಳಾದ ರೈತರಿಗೆ(Farmers) ಸರ್ಕಾರಗಳು ಅನೇಕ ಸೌಲಭ್ಯಗಳನ್ನು, ಯೋಜನೆಗಳನ್ನು, ಅನುದಾನಗಳನ್ನು ನೀಡುತ್ತಿವೆ. ಅಂದಹಾಗೆ ಸರಿಯಾದ ಸಮಯಕ್ಕೆ ಮಳೆ, ಬೆಳೆಗಳಾಗದೆ ರೈತರು ಸಾಲದ ಶೂಲಕ್ಕೆ ಸಿಕ್ಕಿ ನಲುಗುತ್ತಿದ್ದಾರೆ. ಹೀಗಾಗಿ ಸರ್ಕಾರವೇ(Government) ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದು, ಕಿಸಾನ್ ಕರ್ಜ್ ಯೋಜನೆಯಡಿ ಈ ಸಾಲಾ ಮನ್ನಾ ಕಾರ್ಯಕಾರಮಕ್ಕೆ ಮುಂದಾಗಿದೆ.

ಏನು ಈ ಯೋಜನೆ-ಯಾರು ಜಾರಿಗೆ ತಂದದ್ದು?
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಆದಿತ್ಯನಾಥ್ ಯೋಗಿ(Yogi adidtyanath) ಜಿ ಅವರು ಯುಪಿಯಲ್ಲಿ ರೈತರ ಸಾಲವನ್ನು ಮುಕ್ತಗೊಳಿಸಲು ಈ ವರ್ಷ ಮಹತ್ವದ ಯೋಜನೆಯನ್ನು ನಡೆಸುತ್ತಿದ್ದಾರೆ. ಎಲ್ಲಾ ಉತ್ತರ ಪ್ರದೇಶ(Uttar pradesh) ರಾಜ್ಯದ ರೈತರು ಮತ್ತು ಮಧ್ಯಮ ರೈತರು ಈ ವಿಧಾನವನ್ನು ಬಳಸಿಕೊಂಡು ತಮ್ಮ ಬ್ಯಾಂಕ್ ಸಾಲಗಳನ್ನು ಪಾವತಿಸಲು ಸಾಧ್ಯವಾಗುತ್ತದೆ. ಈ ತರದ ಯೋಜನೆಗಳು ನಮ್ಮ ರಾಜ್ಯಗಳಲ್ಲೂ ಜಾರಿಯಾದರೆ ಲಕ್ಷಾಂತರ ರೈತರಿಗೆ ತುಂಬಾ ಅನುಕೂಲವಾಗಲಿದೆ. ರೈತರಿಂದ ರಾಜ್ಯ, ದೇಶ. ಹೀಗಾಗಿ ಈ ಯೋಜನೆಯನ್ನೂ ಪ್ರತಿಯೊಂದು ರಾಜ್ಯವೂ ಜಾರಿಗೊಳಿಸಬೇಕೆಂಬುದು ಎಲ್ಲರ ಅಪೇಕ್ಷೆ.

ಯಾರು ಅರ್ಹರು?-ಲಾಭಗಳೇನು?
• ಕಿಸಾನ್ ಕರ್ಜ್ ಮಾಫಿ ಯೋಜನೆಯು ರೈತರ ಸಾಲ ಕಡಿತ ಯೋಜನೆಯಾಗಿದೆ.
• ಈ ಯೋಜನೆಯಡಿಯಲ್ಲಿ ಒಂದು ಲಕ್ಷ ರೂಪಾಯಿವರೆಗಿನ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ.
• ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ.
• ಉತ್ತರ ಪ್ರದೇಶ ಕಿಸಾನ್ ಕರ್ಜ್ ಮಾಫಿ ಯೋಜನೆ ಯೋಜನೆಯಲ್ಲಿ, ಎಂಭತ್ತಾರು ಲಕ್ಷದವರೆಗೆ ರೈತರು ಸಾಲ ಮುಕ್ತರಾಗುತ್ತಾರೆ.
• ಈ ಯೋಜನೆಯಡಿ, 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ರೈತರು ಪ್ರಯೋಜನ ಪಡೆಯುತ್ತಾರೆ.
• ಕಿಸಾನ್ ಕರ್ಜ್ ಮಾಫಿ ಪಟ್ಟಿ 2023 ರಲ್ಲಿ ಹೆಸರು ಇರುವ ರೈತರು ಮಾತ್ರ ಈ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ.
• ಉತ್ತರ ಪ್ರದೇಶ ಕಿಸಾನ್ ಕರ್ಜ್ ಮಾಫಿ ಯೋಜನೆಯು ಕೃಷಿ ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ.
• ಈ ಯೋಜನೆಯಿಂದ ಪ್ರತಿಯೊಬ್ಬ ರೈತರು ಸಾಲದಿಂದ ಮುಕ್ತರಾಗುತ್ತಾರೆ.

ಬೇಕಾಗಿರುವ ದಾಖಲೆಗಳು :
• ಆಧಾರ್ ಕಾರ್ಡ್
• ಫೋಟೋ ಗುರುತಿನ ಚೀಟಿ
• ಮೊಬೈಲ್ ನಂಬರ
• ಪಾಸ್ಪೋರ್ಟ್ ಗಾತ್ರದ ಫೋಟೋ
• ಬ್ಯಾಂಕ್ ಖಾತೆಯ ಪಾಸ್‌ಬುಕ್
• ಅರ್ಜಿದಾರರ ನಿವಾಸ ಪ್ರಮಾಣಪತ್ರ
• ಕೃಷಿ ಭೂಮಿ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯಲ್ಲಿ ನಿರ್ಧರಿಸಿದ ಅರ್ಹತೆಯನ್ನು ನೀವು ನಿರ್ಧರಿಸಿದರೆ ಮತ್ತು ನೀವು ಯುಪಿ ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ. ನೀವು ಅದರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Gruha lakshmi: ರೇಷನ್ ಕಾರ್ಡ್‌ನಲ್ಲಿ ಯಾಜಮಾನಿ ಹೆಸರಿಲ್ಲವೆ? ಹಾಗಿದ್ರೆ ಚಿಂತೆ ಬಿಡಿ, ಜಸ್ಟ್ ಹೀಗ್ ಮಾಡಿ- ಗೃಹಲಕ್ಷ್ಮೀ ದುಡ್ಡು ಪಡೆಯಿರಿ !!