Home Business ಭಾರೀ ಮಳೆ | ಅಡಕೆ ಬೆಳೆಗಾಗರರ ಸಂಕಷ್ಟ

ಭಾರೀ ಮಳೆ | ಅಡಕೆ ಬೆಳೆಗಾಗರರ ಸಂಕಷ್ಟ

Hindu neighbor gifts plot of land

Hindu neighbour gifts land to Muslim journalist

ಅಕಾಲಿಕ ಮಳೆಯು ಕೃಷಿಕರನ್ನು ಕಂಗೆಡಿಸುತ್ತಿದೆ. ಮಳೆಯಿಂದಾಗಿ ಪ್ರತಿಯೊಬ್ಬ ರೈತನು ಸಮಸ್ಯೆಯನ್ನು ಎದುರಿಸಲು ಸಾಧ್ಯ ಆಗದೆ ಸರ್ಕಾರದ ಪರಿಹಾರಕ್ಕಾಗಿ ಮೊರೆ ಹೋಗಿದ್ದಾರೆ.

ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚಳಿಯ ವಾತಾವರಣ ಇರುತ್ತದೆ. ಆದರೆ, ಈ ಬಾರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಳೆಯಿಂದ ರೈತರಿಗೆ ಅಪಾರ ನಷ್ಟವುಂಟಾಗಿದೆ.

ಹೌದು ವರುಣನ ಆರ್ಭಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಡಿಕೆಗೆ ಎಲೆಚುಕ್ಕಿ ರೋಗದಿಂದ ಸಾಕಷ್ಟು ಸಂಕಟವುಂಟಾಗಿದೆ.

ಅಂದಾಜು ಸುಮಾರು ಒಂದು ಎಕರೆಗೆ ಕನಿಷ್ಠ ಏಳರಿಂದ ಎಂಟು ಕ್ವಿಂಟಾಲ್ ಒಣ ಅಡಿಕೆ ಫಸಲು ಸಿಗುತ್ತಿತ್ತು. ಆದರೆ, ಇದೀಗ ಎರಡು ಕ್ವಿಂಟಲ್ ಅಡಿಕೆ‌ ಕಡಿಮೆ ಬಂದಿದೆ. ಶೇಕಡಾ 35ರಿಂದ 40ರಷ್ಟು ನಷ್ಟ ಪೋಲಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ರೈತರಿಗೆ ಎಕರೆಗೆ ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.

ಅದಲ್ಲದೆ ಗೊಬ್ಬರ, ಮಳೆ ನೀರು ತೋಟಕ್ಕೆ ನುಗ್ಗಿದ ಕಾರಣ ನೀರಿನಲ್ಲೇ ಅಡಿಕೆ ಕೊಯ್ಲು ತೆಗೆದಿದ್ದಾರೆ. ಇದಕ್ಕೂ ಹೆಚ್ಚಿನ ಹಣ ವೆಚ್ಚವಾದಂತಾಗಿದೆ. ಅಡಿಕೆಯನ್ನು ಮೂರರಿಂದ ನಾಲ್ಕು ಹಂತಗಳಲ್ಲಿ ಕೊಯ್ಲು ತೆಗೆಯಲಾಗುತ್ತಿದೆ.

ಇದೀಗ ಮಳೆಯಿಂದ ಮತ್ತಷ್ಟು ಬೆಳೆ ಹಾನಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲೂ ಈ ಬಾರಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಮುಂಗಾರು, ಹಿಂಗಾರು ಮಳೆ ಭಾರೀ ಪ್ರಮಾಣದಲ್ಲಿ ಸುರಿದ ಪರಿಣಾಮ ಕೆಲವೆಡೆ ಫಸಲು ನೀಡುತ್ತಿದ್ದ ಮರಗಳು ಧರೆಗುರುಳುತ್ತಿದೆ.

ಈ ಬಾರಿ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಅಡಿಕೆ ಫಸಲು ಉತ್ತಮವಾಗಿದ್ದರೂ, ಕಾಯಿ ಮಾತ್ರ ತೂಕ ಬಂದಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ.

ಕಳೆದ ವರ್ಷ ಅಡಿಕೆ ಬೆಳೆ ಹೆಚ್ಚಿನ ಲಾಭ ಬಂದಿರಲಿಲ್ಲ. ಈ ವರ್ಷ ಫಸಲು ಕಡಿಮೆ ಬಂದಿದೆ. ತೋಟಕ್ಕೆ ಗೊಬ್ಬರ, ಟ್ರ್ಯಾಕ್ಟರ್, ಸ್ವಚ್ಛತೆ, ಅಡಿಕೆ ಕೊಯ್ಲು, ಹೆಚ್ಚಿನ ವೆಚ್ಚ ತಗುಲಿದೆ. ಕಾರ್ಮಿಕರಿಗೆ ವೇತನ ಸೇರಿದಂತೆ ಸಾಕಷ್ಟು ಖರ್ಚು ಆಗಿದೆ. ಈಗ ಎಲ್ಲವೂ ನೀರಿನಲ್ಲಿ ಪೋಲಾದಂತಾಗಿದೆ ಎನ್ನುವುದು ರೈತರ ಅಳಲಾಗಿದೆ.
ಪ್ರತಿ ಕ್ವಿಂಟಲ್ ಗೆ 50 ಸಾವಿರ ರೂಪಾಯಿ ದಾಟಿದರೆ ಸ್ವಲ್ಪ ಮಟ್ಟಿಗೆ ಲಾಭ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಅನಿರೀಕ್ಷಿತ ಮಳೆಯಿಂದಾಗಿ ಅಡಿಕೆ ಬೆಳಗಾರರು ಅಷ್ಟೇ ಅಲ್ಲ, ಮೆಕ್ಕೆಜೋಳ, ಭತ್ತ, ತರಕಾರಿ, ರಾಗಿ ಸೇರಿದಂತೆ ಎಲ್ಲಾ ಬೆಳೆಗಳು ನೀರುಪಾಲಾಗಿವೆ.

ಅಡಿಕೆ ಬೆಳೆಗಾರರೂ ನಷ್ಟ ಅನುಭವಿಸಿದ್ದು ಮಾತ್ರವಲ್ಲ ಶೇಕಡಾ 25 ರಷ್ಟು ಅಡಿಕೆ ಹಾಳಾಗಿದ್ದರೆ, ತೂಕ ಬಂದರೂ ಇಳುವರಿ ಕಡಿಮೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದಾಗಿ ಟೊಮೆಟೊ ಮತ್ತು ಆಲೂಗಡ್ಡೆಯಲ್ಲಿ ಕೇಡು ರೋಗ ಕಾಣಿಸಿಕೊಂಡಿರುವುದು ಸಹ ಅಪಾರ ಕೃಷಿ ಹಾಳಾಗಿದೆ.

ಒಟ್ಟಾರೆ ಅಕಾಲಿಕ ಮಳೆಯಿಂದ ಜನರು ತತ್ತರಿಸಿ ಹೋಗಿರುವುದಲ್ಲದೆ ಅಪಾರ ನಷ್ಟ ಅನುಭವಿಸಿದ್ದಾರೆ.