Home ಕೃಷಿ ಕುರಿ, ಮೇಕೆ ಘಟಕ ಸ್ಥಾಪಿಸಲು ಧನ ಸಹಾಯ; ಸಾಲ, ಅರ್ಜಿ ಸಲ್ಲಿಸುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

ಕುರಿ, ಮೇಕೆ ಘಟಕ ಸ್ಥಾಪಿಸಲು ಧನ ಸಹಾಯ; ಸಾಲ, ಅರ್ಜಿ ಸಲ್ಲಿಸುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

Goat-Sheep farming loan

Hindu neighbor gifts plot of land

Hindu neighbour gifts land to Muslim journalist

Goat-Sheep farming loan:  ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ರೈತರಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. 2022-23ನೇ ಸಾಲಿನಲ್ಲಿ ಮಂಜೂರಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಯ (10+1) ಕುರಿ/ಮೇಕೆ ಘಟಕಗಳ ಸಹಾಯಧನ (Goat-Sheep farming loan) ಪಡೆಯಲು ಅರ್ಹರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಸಾ ಮಾನ್ಯ ವರ್ಗದ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಆಸಕ್ತ ರೈತರು, ಈ ಯೋಜನೆ ಮೂಲಕ ಇಡೀ ಕುರಿ ಇಲ್ಲವೇ ಮೇಕೆ ಘಟಕ ಸ್ಥಾಪಿಸಲು 70,000 ರೂಪಾಯಿಗಳ ಅನುದಾನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ನೀವು ಶೇ.50ರಷ್ಟು ಅಂದರೆ 35,000 ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಬ್ಯಾಂಕ್ ಸಾಲದ ಮೊತ್ತ 35,000 ಇರಲಿದೆ.

ಅರ್ಜಿ ಸಲ್ಲಿಸಲು ಫೆಬ್ರುವರಿ 28 ಕೊನೆಯ ದಿನವಾಗಿದ್ದು, ಆಸಕ್ತ ರೈತರು ಅರ್ಜಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಅವರಣ ರಾಯಚೂರಿನಲ್ಲಿ ಪಡೆದುಕೊಂಡು ಇದಕ್ಕೆ ಪೂರಕವಾಗಿ ಬೇಕಾದ ಅಗತ್ಯ ದಾಖಲಾತಿಗಳನ್ನು ಭರ್ತುಕೊಂದು ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : ULPIN : ಸ್ವಂತ ಜಮೀನು ಹೊಂದಿದ್ದೀರಾ ? ಸರಕಾರದಿಂದ ನಿಮಗೊಂದು ಮಹತ್ವದ ಮಾಹಿತಿ!

ಈ ಕುರಿತ ಯಾವುದೇ ಗೊಂದಲ ಅನುಮಾನಗಳಿದ್ದರೆ ಇಲ್ಲವೇ ಹೆಚ್ಚಿನ ಮಾಹಿತಿ ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಪಶು ಆಸ್ಪತ್ರೆ ಆವರಣ ರಾಯಚೂರು (Karnataka Sheep & Wool Development Corporation Ltd)ಇಲ್ಲಿಗೆ ಭೇಟಿ ನೀಡಬಹುದೆಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.