Home ಕೃಷಿ PM Kisan Samman Nidhi : ರೈತರೇ ಎಚ್ಚರ ಇದೆಲ್ಲ ಸರಿಯಾಗಿದ್ದರೆ ಮಾತ್ರ ಪಿಎಂ ಕಿಸಾನ್...

PM Kisan Samman Nidhi : ರೈತರೇ ಎಚ್ಚರ ಇದೆಲ್ಲ ಸರಿಯಾಗಿದ್ದರೆ ಮಾತ್ರ ಪಿಎಂ ಕಿಸಾನ್ ಹಣ ನಿಮಗೆ ಸೇರುತ್ತದೆ!

PM Kissan Samman Nidhi

Hindu neighbor gifts plot of land

Hindu neighbour gifts land to Muslim journalist

PM Kisan Samman Nidhi :ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan Samman Nidhi) ಯೋಜನೆಯ ನಿಯಮಗಳು ಕಠಿಣವಾಗುತ್ತಿವೆ. ರೈತರೇ ಎಚ್ಚೆತ್ತುಕೊಳ್ಳಿ. ಎಲ್ಲ ಮಾಹಿತಿಯೂ ಸರಿಯಾಗಿ ಇದ್ದರೆ ಮಾತ್ರ ಹಣ ನಿಮ್ಮ ಖಾತೆಗೆ ಬರಲಿದೆ.  ಕೇಂದ್ರ ಸರ್ಕಾರ ಪಿಎಂ ಕಿಸಾನ್ 13 ನೇ ಕಂತನ್ನು ಫೆಬ್ರವರಿ 27 ರಂದು ಬಿಡುಗಡೆಯಾಗಿದೆ. ಪಿಎಂ ಕಿಸಾನ್ 14 ನೇ ಕಂತಿನ ಹಣ ಇನ್ನೇನೂ ಶೀಘ್ರದಲ್ಲೆ ಠೇವಣಿ ಮಾಡಲಾಗುವುದು. ಇದನ್ನು ಏಪ್ರಿಲ್- ಜುಲೈ ತಿಂಗಳಿಗೆ ಮುಂದೂಡಿಕೆ ಮಾಡಲಾಗಿದೆ. ಈ ಹಣಕ್ಕಾಗಿ ರೈತರು ಸರಿಯಾದ ವಿವರಗಳನ್ನು ನೀಡಿದರೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರ ಕಂತನ್ನು ಮೇ ಅಥವಾ ಜೂನ್ ನಲ್ಲಿ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ ಸರ್ಕಾರವು ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಅದಕ್ಕೂ ಮುನ್ನ ರೈತರು ಪರಿಶೀಲನೆ ಪ್ರಕ್ರಿಯೆಯನ್ನು ಸರಿಯಾಗಿ ಪೂರ್ಣಗೊಳಿಸಬೇಕು. ಇದಾದ ಬಳಿಕವೇ ಹಣ ಖಾತೆಗೆ ಬೀಳುತ್ತದೆ.  ಆಧಾರ್ ಸೀಡಿಂಗ್, ಇ- ಕೆವೈಸಿ, ಭೂಮಿ ಬಿತ್ತನೆ ಮಾಡಿದ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ದೊರಕುತ್ತದೆ. ಎಷ್ಟು ಮಾಹಿತಿ ನೀಡಿದರೆ ಸಾಕಾಗುವುದಿಲ್ಲ, ಇದರ ಜೊತೆಗೆ  ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ದಾಖಲೆಗಳು ಸರಿಯಾಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ, ಇದರಿಂದ ಎಷ್ಟೋ ರೈತರಿಗೆ ಪಿಎಂ ಕಿಸಾನ್ (PM Kisan Samman Nidhi)ಹಣ ದೊರಕಿಲ್ಲ.

ಇದರ ಮೊದಲು ಪಿಎಂ ಕಿಸಾನ್ ಇ- ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನಾಂಕವಿತ್ತು, ಆದರೆ ಇದೀಗ ಕೊನೆಯ ದಿನಾಂಕವಿಲ್ಲ. ರೈತರು ಯಾವಾಗ ಬೇಕಾದರೂ ಇ- ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದರ ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿದೆ ನೋಡಿ. https://pmkisan.gov.in/

ಇ – ಕೆವೈಸಿ ಪ್ರಕ್ರಿಯೆಯನ್ನು  ಹೇಗೆ ಮಾಡುವುದು ಎಂದು ತಿಳಿಯಿರಿ.

*ಮೊದಲು ರೈತರು ಪಿಎಂ ಅಧಿಕೃತ ವೆಬ್ ಸೈಟ್ https://pmkisan.gov.in/ ತೆರೆಯಿರಿ.

*ನಂತರ ಮುಖಪುಟದಲ್ಲಿ eKYC ಆಯ್ಕೆ ಮಾಡಿ.

*ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.

*ಬಳಿಕ ಅದನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ ಆಮೇಲೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

*ಮೊಬೈಲ್ ಗೆ ಬಂದ OTP ಯನ್ನು ಅದಕ್ಕೆ ನಮೂದಿಸಿ ಮತ್ತು ಒಪ್ಪಿಗೆ ನೀಡಿದ ಮೇಲೆ ಟಿಕ್ ಗುರುತು ಹಾಕಿ ಸಲ್ಲಿಸಿ.

*ನಿಮ್ಮ ಇ- ಕೆವೈಸಿ ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.

ಒಂದು ವಿಷಯ ನೆನಪಿನಲ್ಲಿಡಿ. ನೀವೇನಾದರೂ ಆಧಾರ್ ವಿವರಗಳನ್ನು ಸರಿಯಾಗಿ ನಮುದಿಸದಿದ್ದರೆ, ಹಣ ನಿಮ್ಮ ಖಾತೆಗೆ ಜಮಾವಾಗುವುದಿಲ್ಲ.

ವಿವರಗಳನ್ನು ಹೇಗೆ ಸಂಪಾದಿಸಬೇಕು ಎಂದು   ತಿಳಿಯಿರಿ.

*ಈ  https://pmkisan.gov.in/ ವೆಬ್‌ಸೈಟ್ ಅನ್ನು ತೆರೆಯಿರಿ.

* ರೈತರ ಕಾರ್ನರ್ ವಿಭಾಗದಲ್ಲಿ ಎಡಿಟ್ ಆಧಾರ್‌ ವೈಫಲ್ಯ ದಾಖಲೆಗಳ ಮೇಲೆ ಕ್ಲಿಕ್ ಮಾಡಿ.

* ನಂತರ ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಹೆಸರನ್ನು ಆಯ್ಕೆ ಮಾಡಿ.

* ದಾಖಲೆಗಳ ವಿವರಗಳನ್ನು ನಮೂದಿಸಿ ಮತ್ತು ಹುಡುಕಿ.

* ಬಳಿಕ  ನಿಮ್ಮ ಹೆಸರು ಮತ್ತು ಇತರ ಎಲ್ಲಾ ವಿವರಗಳನ್ನು ಪರಿಶೀಲಿಸಿ.

* ಏನಾದರೂ ವಿವರಗಳಲ್ಲಿ ತಪ್ಪು ಇದ್ದಾರೆ, ಅವುಗಳನ್ನು ಮತ್ತೆ ಸರಿಪಡಿಸಿಕೊಳ್ಳಬಹುದು.