Home ಕೃಷಿ 600 ರೂಪಾಯಿಗಳ ಅಂತರಿಕ್ಷ ಹಾರಾಟ ನಡೆಸಲಿದೆ ಅಡಿಕೆ

600 ರೂಪಾಯಿಗಳ ಅಂತರಿಕ್ಷ ಹಾರಾಟ ನಡೆಸಲಿದೆ ಅಡಿಕೆ

Hindu neighbor gifts plot of land

Hindu neighbour gifts land to Muslim journalist

ನೇಪಾಳ ಸರ್ಕಾರ ಆಮದು ನಿಷೇಧಗಳ ಪಟ್ಟಿಯಲ್ಲಿ ಅಡಕೆಯನ್ನೂ ಸೇರಿಸಿದೆ. ಈ ಮಹತ್ವದ ಬೆಳವಣಿಗೆ ನಮ್ಮ ಅಡಿಕೆ ಬೆಳೆಗಾರರ ಪಾಲಿಗೆ ವರದಾನವಾಗಿದ್ದು, ಭವಿಷ್ಯದಲ್ಲಿ ದೇಶೀಯ ಅಡಕೆಗೆ ಬಂಪರ್ ಬೆಲೆ ಸಿಗಲಿದೆ. ಈಗಾಗಲೇ ಕೊಂಬೆ ಏರಿ ಕೂತಿರುವ ಅಡಿಕೆಯ ಬೆಲೆ ಮತ್ತೆ ಆಕಾಶ ಮುಖಿ ಪಯಣ ನಡೆಸಲಿದೆ. ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಹಬ್ಬದ ದಿನದಂದೇ ಖುಷಿಯ ನ್ಯೂಸ್ ದೊರೆತಿದೆ.

2020ರ ಲಾಕ್‌ಡೌನ್ ವೇಳೆ ನೇಪಾಳ ಸರ್ಕಾರ ವಿದೇಶಿ ಕರೆನ್ಸಿ ಕುಸಿತ ತಡೆಗಟ್ಟಲು, ಐಷಾರಾಮಿ ವಾಹನಗಳ ಜೊತೆಗೆ ದುಬಾರಿ ಖಾದ್ಯ, ಅಡಕೆ ಸೇರಿದಂತೆ ಕೆಲವು ಕಾಡುತ್ಪತ್ತಿ ವಸ್ತುಗಳ ಆಮದನ್ನು ನಿಷೇಧಿಸಿತ್ತು. ಆದರೆ, 2021ರ ಮಾರ್ಚ್‌ನಲ್ಲಿ ಕೃಷ್ಣ ಉತ್ಪನ್ನಗಳ ಆಮದು ಮೇಲಿನ ನಿರ್ಬಂಧವನ್ನು ಷರತ್ತುಬದ್ಧವಾಗಿ ಸಡಿಲಿಸಿತು.15ರಿಂದ 20 ಸಾವಿರ ಟನ್‌ ಅಡಕೆ ಹಾಗೂ ಕಾಳುಮೆಣಸು, 5 ಸಾವಿರ ಖರ್ಜೂರವನ್ನು ಕೈಗಾರಿಕಾ ಉದ್ದೇಶಗಳಿಗೆ ಅಮದು ಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಸಡಿಲಿಕೆ ಕಳ್ಳಸಾಗಾಟಗಾರರಿಗೆ ಲಾಭವಾಗಿ ಪರಿಣಮಿಸಿತು.

ನೇಪಾಳಕ್ಕೆ ಬಂದ ಬಹುತೇಕ ಅಡಕೆ ನೇಪಾಳದ ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗದೆ ಕಳ್ಳಸಾಗಾಣಿಕೆಯ ಮೂಲಕ ಭಾರತಕ್ಕೆ ಸಾಗಾಟ ಮಾಡಿರುವುದನ್ನು ನೇಪಾಳ ಸರ್ಕಾರ ಪತ್ತೆ ಮಾಡಿದೆ. ಹೀಗಾಗಿ ನೇಪಾಳ ಸರಕಾರ ಆಮದನ್ನು ಮತ್ತೆ ನಿಷೇಧಿಸಿದೆ.

ಅಡಿಕೆ ಹಾಗೂ ಕೆಲ ಉತ್ಪನ್ನಗಳನ್ನು ನಿಷೇಧಿತ ಪಟ್ಟಿಗೆ ವಾಣಿಜ್ಯ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೆ ಅಸ್ಸಾಂ ಗಡಿಯಲ್ಲಿ ಕಳ್ಳಸಾಗಾಟ ಚುರುಕಾಗಿದೆ.

ಗಡಿಭದ್ರತಾ ಪಡೆ ಕಳ್ಳಸಾಗಾಟ ಪತ್ತೆ ಮಾಡಿ ವಶಕ್ಕೆ ಪಡೆದು ಮಿಜೋರಾಂನಲ್ಲಿ ನಿಯೋಜಿಸಲಾಗಿರುವ ಗಡಿ ಭದ್ರತಾ ಪಡೆ ಸಿಬ್ಬಂದಿ ಚಂಪೈ ಜಿಲ್ಲೆಯಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ  13.99 ಲಕ್ಷ ರೂ.ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರದೇಶದಲ್ಲಿ 55 ಚೀಲಗಳಷ್ಟು ಅಡಕೆ ಪತ್ತೆ ಮಾಡಲಾಗಿದೆ.