Home ಕೃಷಿ Agri loan: ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ರೂ.5 ಲಕ್ಷ ಮತ್ತು 3 ಶೇ. ಬಡ್ಡಿದರದಲ್ಲಿ ರೂ.15...

Agri loan: ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ರೂ.5 ಲಕ್ಷ ಮತ್ತು 3 ಶೇ. ಬಡ್ಡಿದರದಲ್ಲಿ ರೂ.15 ಲಕ್ಷಗಳವರೆಗೆ ಸಾಲ ವಿತರಣೆ : ಸರಕಾರ ಆದೇಶ

Agri loan

Hindu neighbor gifts plot of land

Hindu neighbour gifts land to Muslim journalist

Agri loan: ಪುತ್ತೂರು : 2023-24 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಶೂನ್ಯ ಬಡ್ಡಿದರ ಅನ್ವಯವಾಗುವಂತೆ ರೂ.5 ಲಕ್ಷಗಳವರೆಗೆ ಅಲ್ಪಾವಧಿ ಕೃಷಿ ಸಾಲ ಮತ್ತು ರೂ.2 ಲಕ್ಷಗಳವರೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ದುಡಿಯುವ ಬಂಡವಾಳ ಸಾಲ ಮತ್ತು ಶೇ.3 ಬಡ್ಡಿ ದರ ಅನ್ವಯವಾಗುವಂತೆ ರೂ.15 ಲಕ್ಷಗಳವರೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ (Agri loan ) ವಿತರಿಸಲು ಸರಕಾರ ಆದೇಶ ಮಾಡಿದೆ.

ಈ ಹಿಂದೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷಗಳ ಮಿತಿಯನ್ನು ರದ್ದು ಪಡಿಸಿ ರೂ.5 ಲಕ್ಷಗಳವರೆಗೆ ವಿಸ್ತರಿಸಲಾಗಿದೆ. 3 ಶೇ. ಬಡ್ಡಿದರ ದಲ್ಲಿ 10 ಲಕ್ಷ ರೂ ವರೆಗೆ ನೀಡುವ ಸಾಲವನ್ನು ರೂ.15 ಲಕ್ಷಗಳವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ದ.ಕ. : ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಸೂಚನೆ