Home Travel ನೀವೂ ಕೂಡ ಗಣೇಶನ 108 ಹೆಸರುಗಳಲ್ಲಿ ಒಬ್ಬರಾಗಿದ್ದೀರಾ? ; ಹಾಗಿದ್ರೆ ಗಣೇಶೋತ್ಸವದ ಪ್ರಯುಕ್ತ ನಿಮಗಿದೆ ವಂಡರ್‌...

ನೀವೂ ಕೂಡ ಗಣೇಶನ 108 ಹೆಸರುಗಳಲ್ಲಿ ಒಬ್ಬರಾಗಿದ್ದೀರಾ? ; ಹಾಗಿದ್ರೆ ಗಣೇಶೋತ್ಸವದ ಪ್ರಯುಕ್ತ ನಿಮಗಿದೆ ವಂಡರ್‌ ಲಾದಿಂದ ಕೊಡುಗೆ!

Hindu neighbor gifts plot of land

Hindu neighbour gifts land to Muslim journalist

ದೇಶದಾದ್ಯಂತ ಜನರು ಗಣೇಶ ಹಬ್ಬದ ಸಡಗರಲ್ಲಿದ್ದಾರೆ. ಕೊರೊನಾ ಆತಂಕದ ನಡುವೆಯು ಎಚ್ಚರಿಕೆ ವಹಿಸಿಕೊಂಡು ಹಬ್ಬವನ್ನು ಆಚರಿಸಲಿದ್ದಾರೆ. ಹೀಗಿರುವಾಗ ಹಲವಾರು ಕಂಪನಿಗಳು ಗಣೇಶ ಹಬ್ಬದ ಪ್ರಯುಕ್ತ ಕೆಲವು ಆಫರ್​ಗಳನ್ನು ನೀಡಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳನ್ನು ಒದಗಿಸುತ್ತಿದೆ. ಅದರಂತೆ ಇದೀಗ ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ ಲಾ ಹಾಲಿಡೇಸ್ ಲಿಮಿಟೆಡ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಿದೆ.

ವಂಡರ್​ಲಾ ಜನಪ್ರಿಯ ಪಾರ್ಕ್ ಆಗಿದ್ದು, ಪ್ರವಾಸಿಗರು ಇಲ್ಲಿ ಎಂಜಯ್​ ಮಾಡಲು ಬರುತ್ತಾರೆ. ಫೆರ್ರಿಸ್​ ವೀಲ್​​​​, ವಾಟರ್​ ರೈಡ್​, ವರ್ಚುವಲ್ ರಿಯಾಲಿಟಿ  ಅನುಭವವನ್ನು ಪಡೆಯಬಹುದಾಗಿದೆ. ಇದೀಗ ಗಣೇಶನ ಹೆಸರಿನವರು ಫ್ರೀ ಆಗಿ ಎಂಜಾಯ್ ಮಾಡಬಹುದಾಗಿದೆ. ಹೌದು. ಗಣೇಶನ 108 ಹೆಸರುಗಳಲ್ಲಿ ನಿಮ್ಮ ಹೆಸರೂ ಒಂದಾಗಿದ್ದರೆ, ನೀವು ಆಗಸ್ಟ್ 31ರಂದು ವಂಡರ್‌ ಲಾ ಪಾರ್ಕ್‌ಗೆ ಉಚಿತ ಪ್ರವೇಶ ಪಡೆಯಬಹುದು. ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ವಂಡರ್‌ಲಾ ಪಾರ್ಕ್‌ಗಳಾದ್ಯಂತ ಮೊದಲ 100 ಆಫ್‌ಲೈನ್ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯವಾಗಲಿದೆ.

ಈ ಆಫರ್‌ ಪಡೆಯಲು ಬಯಸುವವರು ವಂಡರ್‌ ಲಾಗೆ ಭೇಟಿ ನೀಡುವ ವೇಳೆ ಯಾವುದಾದರೊಂದು ಗುರುತಿನ ಚೀಟಿ ತಂದಿರುವುದು ಕಡ್ಡಾಯವಾಗಿದೆ. ಹೆಚ್ಚಿನ ವಿವರಗಳಗಾಗಿ 080-37230333 ಸಂಪರ್ಕಿಸಬಹುದು.

ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬ ಮನೆ ಮಾಡಿದೆ. ವಿಘ್ನ ವಿನಾಯಕ, ಗೌರಿ ಪುತ್ರ, ಏಕದಂತ, ಗಣಪತಿ, ಮಂಗಳಮೂರ್ತಿ, ವಿಘ್ನೇಶ್ವರ, ದುಃಖಹರ್ತ, ಸುಖಕರ್ತ, ಲಂಭೋದರ, ವಿನಾಯಕ, ಗಜಮುಖ, ಮೂಷಿಕವಾಹನ, ಮೋದಕಪ್ರೀಯ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಭಗವಂತನನ್ನು ಆಗಸ್ಟ್ 31ರಂದು ಗಣೇಶ ಹಬ್ಬದ ಮೂಲಕ ವಿಜೃಂಭನೆಯಿಂದ ಆಚರಿಸಲಾಗುತ್ತದೆ.