Home Travel Namma metro: ಮೆಟ್ರೋದಲ್ಲಿ ಮೊಬೈಲ್‌ ಸೌಂಡ್‌ ಜಾಸ್ತಿ ಇಡೋದು, ತಿಂಡಿ ತಿನ್ನೋದು ಮಾಡಿದ್ರೆ ಬೀಳುತ್ತೆ ದಂಡ

Namma metro: ಮೆಟ್ರೋದಲ್ಲಿ ಮೊಬೈಲ್‌ ಸೌಂಡ್‌ ಜಾಸ್ತಿ ಇಡೋದು, ತಿಂಡಿ ತಿನ್ನೋದು ಮಾಡಿದ್ರೆ ಬೀಳುತ್ತೆ ದಂಡ

Hindu neighbor gifts plot of land

Hindu neighbour gifts land to Muslim journalist

Namma metro: ಮೆಟ್ರೋದಲ್ಲಿ ಮೊಬೈಲ್ (Mobile) ಬಳಕೆಯಿಂದಲೇ ಬಹುತೇಕ ರೂಲ್ಸ್ ಬ್ರೇಕ್‌ಗೆ ಕಾರಣವಾಗುತ್ತಿದೆ. ಇದರಿಂದ, ಸಹ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದು, ಒಂದೇ ತಿಂಗಳಲ್ಲಿ ಬಿಎಂಆರ್‌ಸಿಎಲ್‌ಗೆ (BMRCL) ಸಾವಿರಾರು ಸಂಖ್ಯೆಯಲ್ಲಿ ದೂರು ದಾಖಲಾಗಿದೆ.

ಪರಿಣಾಮ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಮೆಟ್ರೋ ಆಡಳಿತ ಮಂಡಳಿ ಮಹತ್ವದ ನಿರ್ಧಾರಕ್ಕೆ ಬಂದಿದೆ.ಮೆಟ್ರೋದಲ್ಲಿ ಕೂತಾಗ ಟೈಮ್ ಪಾಸ್ ಮಾಡೋದಕ್ಕೆ ಬಹುತೇಕ ಜನ ಮೊಬೈಲ್ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ರೀಲ್ಸ್ ಸ್ಕ್ರಾಲ್, ಕೆಲವರಿಂದ ಯುಟ್ಯೂಬ್ ವೀಕ್ಷಣೆ, ಹಲವರು ಬ್ಲೂಟೂತ್ ಹಾಕಿ ಏರುಧ್ವನಿಯಲ್ಲಿ ಮಾತನಾಡೋದು ಈಗ ಹಲವು ಸಹ ಪ್ರಯಾಣಿಕರ ಕಿರಿಕಿರಿಗೆ ಕಾರಣವಾಗಿದೆ. ಮೆಟ್ರೋ ಟ್ರಾವೆಲಿಂಗ್ ವೇಳೆ ಸೌಂಡ್ ಜಾಸ್ತಿ ಇಟ್ಟುಕೊಂಡು ಮೊಬೈಲ್ ಬಳಕೆ ಮಾಡಬಾರದು ಅನ್ನೋ ನಿಯಮ ಇದ್ದರೂ ಉಲ್ಲಂಘನೆ ಆಗುತ್ತಿದೆ. ಇದೇ ಕಾರಣಕ್ಕೆ ದಂಡ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಇನ್ನು ಮೊಬೈಲ್ ಅಲ್ಲಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅಲ್ಲಲ್ಲಿ ಊಟ, ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರು ಕಂಡು ಬರುತ್ತಲೇ ಇದೆ. ಡಿಸೆಂಬರ್ 5ರಿಂದ 25ರವರೆಗಿನ ಡೇಟಾ ಪ್ರಕಾರ 6,520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದು 268 ಕೇಸ್ ದಾಖಲು ಆಗಿದೆ. ತಂಬಾಕು ಸೇವನೆಯ ಅಡಿ 641 ದೂರು ರಿಜಿಸ್ಟರ್ ಆಗಿದೆ.‌ ಇನ್ನು ನಮ್ಮ ಮೆಟ್ರೋದಲ್ಲಿ ಕಳೆದ ಒಂದು ವರ್ಷದಿಂದ ಈ ಬಗ್ಗೆ ಸರ್‌ಪ್ರೈಸ್ ತಪಾಸಣೆ ಮಾಡಲಾಗುತ್ತಿದೆ. ಹಲವು ಬಾರಿ ಹಲವರಿಗೆ ವಾರ್ನಿಂಗ್ ಕೊಟ್ಟು ಕೊಟ್ಟು ಸಾಕಾದ ಹಿನ್ನೆಲೆ ದಂಡಾಸ್ತ್ರ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡುತ್ತಿದ್ದು, ಶೀಘ್ರದಲ್ಲೇ ಫೈನ್ ಅಸ್ತ್ರ ಪ್ರಯೋಗ ಪ್ಲಾನ್ ಅನುಷ್ಠಾನಕ್ಕೆ ಬರಲಿದೆ.