Home Travel Metro: ಇಂದು ರಾತ್ರಿ ಈ ನಿಲ್ದಾಣದಲ್ಲಿ ಮೆಟ್ರೊ ಸೇವೆ ಇರಲ್ಲ

Metro: ಇಂದು ರಾತ್ರಿ ಈ ನಿಲ್ದಾಣದಲ್ಲಿ ಮೆಟ್ರೊ ಸೇವೆ ಇರಲ್ಲ

Hindu neighbor gifts plot of land

Hindu neighbour gifts land to Muslim journalist

Metro: ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಬೆಂಗಳೂರಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಕೂಡ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಮುಖವಾಗಿ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣವನ್ನು ರಾತ್ರಿ 10 ಗಂಟೆ ಬಳಿಕ ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳಾದ, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಚಾರಣೆ ಜೋರಾಗಿರುತ್ತದೆ. ಇಲ್ಲಿ ರಾತ್ರಿ ಇಡೀ ಹೊಸ ವರ್ಷದ ಆಚರಣೆ ಇರುತ್ತದೆ. ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಸೇರುತ್ತಾರೆ.ಹೊಸ ವರ್ಷದಂದು ಈ ಮೆಟ್ರೊ ನಿಲ್ದಾಣ, ಫ್ಲೈ ಓವರ್‌ಗಳಲ್ಲಿ ಪ್ರವೇಶ ಇರಲ್ಲ.

ಈ ಸ್ಥಳದಲ್ಲಿ ಪಾರ್ಟಿ ಹೆಚ್ಚಾಗಿರುವುದರಿಂದ ಜನದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ರಾತ್ರಿ 10 ಗಂಟೆಯ ನಂತರ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣ ಸಂಪೂರ್ಣ ಬಂದ್ ಆಗಲಿದೆ.ಇದಕ್ಕೆ ಬದಲಿ ಮಾರ್ಗವಾಗಿ ಕಬ್ಬನ್‌ ಪಾರ್ಕ್‌ ಹಾಗೂ ಟ್ರಿನಿಟಿ ಮೆಟ್ರೊ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜನರು ಈ ನಿಲ್ದಾಣದ ಮೂಲಕ ಮೆಟ್ರೊ ‌ಬಳಸಬಹುದಾಗಿದೆ. ಅಲ್ಲದೆ ನಗರದಾದ್ಯಂತ 50 ಫೈ ಓವರ್‌ಗಳನ್ನು ತಾತ್ಕಾಲಿಕವಾಗಿ ನಿರ್ಭಂಧಿಸಲಾಗಿದೆ.ಹೊಸ ವರ್ಷದ ಸಂಭ್ರಮದ ವೇಳೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಕಡೆಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ. ವೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ಮೇಲೆ ಕಠಿಣ ಕ್ರಮ. ಇವುಗಳ ಮೇಲ್ವಿಚಾರಣೆ ನಡೆಸಲು 92 ಸ್ಥಳಗಳನ್ನು ಗುರುತಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.