Home Travel Monsoon Season: ಮಳೆಗಾಲಕ್ಕೆ ಛಾವಣಿ ನೀರು ಸೋರಿಕೆಯಾಗುತ್ತಾ? ಈ ಟಿಪ್ಸ್‌ ಫಾಲೋ ಮಾಡಿ

Monsoon Season: ಮಳೆಗಾಲಕ್ಕೆ ಛಾವಣಿ ನೀರು ಸೋರಿಕೆಯಾಗುತ್ತಾ? ಈ ಟಿಪ್ಸ್‌ ಫಾಲೋ ಮಾಡಿ

Hindu neighbor gifts plot of land

Hindu neighbour gifts land to Muslim journalist

Monsoon Season: ಮಳೆಗಾಲದಲ್ಲಿ ಮನೆಯ ಛಾವಣಿ ಸೋರುವುದರಿಂದ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಮನೆಯ ಗೋಡೆಗಳನ್ನು ವಾಟರ್ ಪ್ರೂಫ್​ಗೊಳಿಸದಿದ್ದರೆ, ಛಾವಣಿಯಿಂದ ನೀರು ಸೋರಿಕೆಯಾಗಿ ಗೋಡೆ ಕುಸಿಯಬಹುದಾಗಿದ್ದು, ಮಳೆಯ ತೇವಾಂಶದಿಂದಾಗಿ ಗೋಡೆಗಳ ಮೇಲೆ ಕಪ್ಪು, ಹಳದಿ ಚುಕ್ಕೆಗಳು, ಕಲೆಗಳು, ಶಿಲೀಂಧ್ರಗಳು ರೂಪುಗೊಂಡು ಮನೆ ಸಹ ದುರ್ವಾಸನೆ ಬೀರುತ್ತದೆ.

ಮನೆಯಲ್ಲಿ ದುರ್ವಾಸನೆ ಮನೆ ಮಾಡುವುದರಿಂದ ಆಸ್ತಮಾ, ಅಲರ್ಜಿಗಳು, ಉಸಿರಾಟದ ತೊಂದರೆಗಳು ಮತ್ತು ಚರ್ಮ ರೋಗಗಳು ಬರುವ ಸಾಧ್ಯತೆ ಹೆಚ್ಚು. ಹಾಗೂ ಪೀಠೋಪಕರಣ ಮತ್ತು ಎಲೆಕ್ಟ್ರಿಕ್ ವಸ್ತುಗಳು ಹಾಳಾಗುತ್ತವೆ.

ಹಾಗಾಗಿ ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಸಂಪೂರ್ಣ ಮನೆಯಯನ್ನು ವಾಟರ್​ ಪ್ರೂಫ್​ಗೊಳಿಸುವುದು ತುಂಬಾ ಮುಖ್ಯವಾಗಿದ್ದು, ಇದಕ್ಕಾಗಿ ಮೊದಲು ಛಾವಣಿ, ಬಾಹ್ಯ ಗೋಡೆಗಳು, ಕಿಟಕಿ ಮತ್ತು ಬಾಗಿಲಿನ ಅಂಚುಗಳು, ಸ್ನಾನಗೃಹಗಳು ಮತ್ತು ಬಾಲ್ಕನಿ ಹೀಗೆ ನೀರು ಬರುವ ಜಾಗವನ್ನು ಗುರುತಿಸಿ, ವಾಟರ್​ ಪ್ರೂಫ್​ಗೊಳಿಸಿ. ಇದರಿಂದ ಮನೆಯಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಬಹುದಾಗಿದೆ.