Home Technology Tech Tips : ನಿಮ್ಮ ಫೋನ್‌ ಚಾರ್ಜ್‌ಗೆ ಇಟ್ಟಾಗ ತುಂಬಾ ಬಿಸಿಯಾಗುತ್ತಾ? ಹಾಗಾದರೆ ಈ ಸುದ್ದಿ...

Tech Tips : ನಿಮ್ಮ ಫೋನ್‌ ಚಾರ್ಜ್‌ಗೆ ಇಟ್ಟಾಗ ತುಂಬಾ ಬಿಸಿಯಾಗುತ್ತಾ? ಹಾಗಾದರೆ ಈ ಸುದ್ದಿ ಖಂಡಿತಾ ಓದಿ!

Tips and Tricks

Hindu neighbor gifts plot of land

Hindu neighbour gifts land to Muslim journalist

Tips and Tricks : ಸ್ಮಾರ್ಟ್ ಫೋನ್ ಒಳ್ಳೆ ಫೀಚರ್, ಅಗ್ಗ ಬೆಲೆಗೆ ಲಭ್ಯವಿದೆ ಎಂದು ಖರೀದಿಸುತ್ತೇವೆ. ಆದರೆ ಈ ಸ್ಮಾರ್ಟ್ ಫೋನ್ (Smartphone) ಕೆಲವೊಮ್ಮೆ ಹೆಚ್ಚು ಬಳಸಿದರೆ ಬಿಸಿಯಾಗುತ್ತದೆ, ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತದೆ. ಈ ರೀತಿ ನಿಮ್ಮ ಸ್ಮಾರ್ಟ್ ಫೋನ್ ಕೂಡ ಬಿಸಿಯಾಗುತ್ತಿದ್ದರೆ, ನಿರ್ಲಕ್ಷ್ಯ ಮಾಡಬೇಡಿ. ಈ ಸಲಹೆ(Tips and Tricks) ಪಾಲಿಸಿ.

ನಿಮ್ಮ ಮೊಬೈಲ್(mobile) ಅನ್ನು ಅದರ ಜೊತೆಗೆ ನೀಡಿರುವ ಚಾರ್ಜರ್(charger) ನಿಂದಲೇ ಚಾರ್ಜ್ ಮಾಡಿರಿ. ಎಲ್ಲಾ ಮೊಬೈಲ್​​ಗಳು ಯುಎಸ್‌ಬಿ ಕೇಬಲ್(USB cable) ನಿಂದಲೇ ಚಾರ್ಜ್ ಆಗುತ್ತವೆ ಎಂದು ನಿಮ್ಮ ಮೊಬೈಲ್ ನ ಚಾರ್ಜರ್ ಅನ್ನು ಕಂಪ್ಯೂಟರ್​​ಗೆ(computer) ಹಾಕಬೇಡಿ. ಅಲ್ಲದೆ, ಬೇರೆ ಕಂಪನಿಗಳ ಚಾರ್ಜರ್ ನಿಂದ ಕೂಡ ನಿಮ್ಮ ಮೊಬೈಲ್ ಚಾರ್ಜ್ ಮಾಡಬೇಡಿ. ಒಂದು ವೇಳೆ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ.

ಮೊಬೈಲ್ ನೋಡಲು ಚೆನ್ನಾಗಿರಬೇಕು, ಮೊಬೈಲ್ ಹಾಳಾಗಬಾರದು ಎಂದು ಫ್ಲಿಪ್ ಕವರ್ ಅನ್ನು ಅಳವಡಿಸುತ್ತಿರಾ. ಆದರೆ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ಅಂದ್ರೆ ಕವರ್ ತೆಗೆಯುವುದು ಉತ್ತಮ. ಇದರಿಂದ ಬ್ಯಾಟರಿ(battery) ಬಾಳಿಕೆ ಮತ್ತು ವೇಗವಾಗಿ ಚಾರ್ಜ್(fast charge) ಕೂಡ ಆಗುತ್ತದೆ. ಅಲ್ಲದೆ, ಇದರಿಂದ ಮೊಬೈಲ್ ಚಾರ್ಜ್ ಆಗುವಾಗ ಬಿಸಿ ಕೂಡ ಆಗುವುದಿಲ್ಲ.

ಕೆಲವರು ರಾತ್ರಿ ಮೊಬೈಲ್ ಚಾರ್ಜ್ ಗೆ ಹಾಕಿ, ಮರೆತೋ ಅಥವಾ ತಿಳಿದೋ ಹಾಗೇ ಬೆಳಗ್ಗೇವರೆಗೂ ಬಿಟ್ಟಿರುತ್ತಾರೆ. ಆದರೆ ಇಂದು ತಪ್ಪು, ಹೀಗೆ ಮಾಡಬಾರದು. ಇದು ತುಂಬಾ ಅಪಾಯಕಾರಿ. ಇದರಿಂದ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಹಾಗೆಯೇ ಹೆಚ್ಚು ಹೊತ್ತು ಚಾರ್ಜ್ ಮಾಡಬೇಡಿ. ಶೇ 90 ರಷ್ಟು ಚಾರ್ಜ್ ಆದರೆ ಸಾಕು, ನಂತರ ಮೊಬೈಲ್ ಚಾರ್ಜ್ ನಿಂದ ತೆಗೆಯಿರಿ. ಇಲ್ಲದಿದ್ದರೆ ಬ್ಯಾಟರಿಗೆ ತೊಂದರೆ.

ಇನ್ನು ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎಂದು ಮಾರುಕಟ್ಟೆಯಲ್ಲಿ ಸಿಗುವ ವೇಗದ ಚಾರ್ಜರ್‌(fast charger) ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ. ಇದರಿಂದ ಬ್ಯಾಟರಿ ಬೇಗ ಬಿಸಿಯಾಗುತ್ತದೆ. ಜೊತೆಗೆ ಬ್ಯಾಟರಿಯ ಕ್ಷಮತೆ ಕೂಡ ಕಡಿಮೆಯಾಗುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ವೈಫೈ(wifi) , ಬ್ಲ್ಯೂಟೂತ್(Bluetooth) ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್(wireless charger) ಲಭ್ಯವಿದೆ. ಆದರೆ ಇದನ್ನು ಬಳಸಬೇಡಿ. ನೀವು ಈ ಮೇಲಿನ ಸಲಹೆ ಪಾಲಿಸಿದರೆ, ಬ್ಯಾಟರಿ, ಸ್ಮಾರ್ಟ್ ಫೋನ್ ಉತ್ತಮ ಬಾಳಿಕೆ ಬರುತ್ತದೆ.