Home Technology Telegram Ban: ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ಬ್ಯಾನ್ ?

Telegram Ban: ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ಬ್ಯಾನ್ ?

Telegram Ban

Hindu neighbor gifts plot of land

Hindu neighbour gifts land to Muslim journalist

Telegram Ban: ವಿಶ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ನ (Telegram) ಬ್ಯಾನ್ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಟೆಲಿಗ್ರಾಂ ಅಪ್ಪನ ಬಿಲಿಯನೇರ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಶನಿವಾರ ಪ್ಯಾರಿಸ್ ಬಳಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದರ ನಡುವೆ ಪಾವೆಲ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಭಾರತದಲ್ಲಿ (India) ಟೆಲಿಗ್ರಾಮ್ ಬ್ಯಾನ್ (Telegram Ban) ಮಾಡಲು ಸರ್ಕಾರ ಯೋಚಿಸಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.

ಸುಲಿಗೆ ಮತ್ತು ಜೂಜಾಟ ಇತ್ಯಾದಿ ಸಮಾಜ ಘಾತುಕ ಆ್ಯಪ್ ಗಳನ್ನು ಒಳಗೊಂಡಿರುವ ಅಪರಾಧ ಚಟುವಟಿಕೆಗಳಲ್ಲಿ ಈ ಅಪ್ಲಿಕೇಶನ್‌ನ್ನು ಬಳಸಲಾಗುತ್ತಿದೆಯೇ ಎಂದು ತಿಳಿಯಲು ಸರ್ಕಾರ ತನಿಖೆ ಪ್ರಾರಂಭಿಸಿದೆ. ಕೆಲವು ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಿದ್ದು, ತನಿಖೆಯಲ್ಲಿ ಸತ್ಯ ಬಯಲಾದ್ರೆ, ಟೆಲಿಗ್ರಾಮ್ ಅಪ್ಲಿಕೇಶನ್ ನಿಷೇಧಿಸುವ ಸಾಧ್ಯತೆಯಿದೆ ಅನ್ನುವ ಸುದ್ದಿ ಹರಡಿದೆ.

ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ (I4C) ಮೂಲಕ ಈ ತನಿಖೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಭಾರತದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಿಂದ ಕಾನೂನಿನ ಕ್ರಮ ತೆಗೆದುಕೊಳ್ಳುವ ನೀರಿಕ್ಷೆ ಇದೆ. ಡುರೊವ್ ಅವರು ತನ್ನ ಅಪ್ಲಿಕೇಷನ್ ಅನ್ನು ಕ್ರಿಮಿನಲ್ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ರಷ್ಯಾದ ಮೂಲದ ಡುರೊವ್ ಅವರು ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನ್ನು ಪ್ರಾರಂಭಿಸಿದ್ದರು. ಟೆಲಿಗ್ರಾಮ್ ಭಾರತದಲ್ಲಿ ಸುಮಾರು 5 ಮಿಲಿಯನ್ಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಅಷ್ಟೇ ಅಲ್ಲದೆ ಡುರೊವ್ ಅವರ ಗೆಳತಿ ಈ ಹಿಂದೆ ಮೋಸಾದ ಸಂಘಟನೆಗೆ ದುಡಿದಿದ್ದರು ಎನ್ನುವ ಆಪಾದನೆ ಕೇಳಿ ಬಂದಿದೆ.