Home Technology Sony WH-CH720N : ಮಾರುಕಟ್ಟೆಗೆ ಸೋನಿ WH-CH720N ಹೆಡ್‌ಫೋನ್ ಲಗ್ಗೆ ; ಫೀಚರ್ ಸೂಪರ್ !...

Sony WH-CH720N : ಮಾರುಕಟ್ಟೆಗೆ ಸೋನಿ WH-CH720N ಹೆಡ್‌ಫೋನ್ ಲಗ್ಗೆ ; ಫೀಚರ್ ಸೂಪರ್ ! ಬೆಲೆ ಎಷ್ಟು?

Sony WH-CH720N

Hindu neighbor gifts plot of land

Hindu neighbour gifts land to Muslim journalist

Sony WH-CH720N : ಮಾರುಕಟ್ಟೆಗೆ ವಿವಿಧ ಸಾಧನಗಳು ಎಂಟ್ರಿ ಕೊಡುತ್ತಿವೆ. ಹಾಗೆಯೇ ಇದೀಗ ಸೋನಿ ಕಂಪನಿಯ ಹೆಡ್‌ಫೋನ್ (headphone) ಬಿಡುಗಡೆಯಾಗಿದೆ. ಸೋನಿ WH-CH720N (Sony WH-CH720N ) ಹೆಡ್‌ಫೋನ್‌ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಇದು ಅತ್ಯಂತ ಹಗುರವಾಗಿದ್ದು, ಬಳಕೆದಾರರಿಗೆ ಧರಿಸಿದಾಗ ಉತ್ತಮ ಅನುಭವ ನೀಡುತ್ತದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಸೋನಿ WH-CH720N ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಇದು V1 ಚಿಪ್ ಮತ್ತು ಡ್ಯುಯಲ್ ನಾಯ್ಸ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಇಂಜಿನ್ (ಡಿಎಸ್‌ಇಇ) ತಂತ್ರಜ್ಞಾನವೂ ಇದರಲ್ಲಿದೆ. ಹಾಗೆಯೇ ಇದರಲ್ಲಿ ವಾಯ್ಸ್‌ ಪಿಕಪ್ ಟೆಕ್ನಾಲಜಿ ಅಳವಡಿಸಲಾಗಿದೆ. ಇದಕ್ಕಾಗಿ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಜೊತೆಗೆ ವಿಂಡ್ ನಾಯ್ಸ್ ರಿಡಕ್ಷನ್ ಸ್ಟ್ರಕ್ಚರ್ ಆಯ್ಕೆಯನ್ನೂ ಇದರಲ್ಲಿ ನೀಡಲಾಗಿದೆ.

ಬ್ಯಾಟರಿ ಬಗ್ಗೆ ಹೇಳಬೇಕಾದರೆ, ಸೋನಿಯ (Sony) ಈ ಹಿಂದಿನ ಮಾಡೆಲ್‌ಗಳಿಗೆ ಹೋಲಿಕೆ ಮಾಡಿದರೆ ಇದು ಉತ್ತಮವಾದ ಬ್ಯಾಕಪ್‌ ಹೊಂದಿದೆ. ಈ ಹೆಡ್‌ಫೋನ್ ನಾಯ್ಸ್ ಕ್ಯಾನ್ಸಲಿಂಗ್‌ನೊಂದಿಗೆ 35 ಗಂಟೆಗಳವರೆಗೆ ಬ್ಯಾಟರಿ ಸಾಮರ್ಥ್ಯ ನೀಡಲಿದ್ದು, ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ ಇಲ್ಲದಿರುವಾಗ 50 ಗಂಟೆಗಳ ವರೆಗೆ ಬ್ಯಾಕಪ್‌ ನೀಡಲಿದೆ. ಹಾಗೆಯೇ ಕೇವಲ 3 ನಿಮಿಷದ ಚಾರ್ಜಿಂಗ್‌ನಲ್ಲಿ 1 ಗಂಟೆಯ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಅಲ್ಲದೆ, ಈ ಹೊಸ ಹೆಡ್‌ಫೋನ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದ್ದು, ವಾಯ್ಸ್‌ ಕಂಟ್ರೋಲ್‌ ಆಯ್ಕೆ ಇರಲಿದೆ. ಹಾಗೆಯೇ ಬ್ಲೂಟೂತ್‌ (Bluetooth) ಆವೃತ್ತಿ 5.2 ಹಾಗೂ ಎಎಸಿ ಮತ್ತು ಎಸ್‌ಬಿಸಿ ಆಡಿಯೊ ಕೊಡೆಕ್‌ಗಳನ್ನು ಹೊಂದಿದೆ. ಬಳಕೆದಾರರಿಗೆ ಧರಿಸಿದಾಗ ಉತ್ತಮ ಅನುಭವ ನೀಡುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 9,990 ರೂ. ಆಗಿದ್ದು, ಸೋನಿ ಹೆಡ್ ಫೋನ್ ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಸೋನಿ WH-CH720N ನೀವು ಇಂದಿನಿಂದ ಸೋನಿ ರಿಟೇಲ್ ಸ್ಟೋರ್‌ಗಳಾದ ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ಕ್ಲೂಸಿವ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಅಲ್ಲದೆ, www.ShopatSC.com ಸೇರಿದಂತೆ ಪ್ರಮುಖ ಇ- ಕಾಮರ್ಸ್‌ ಸೈಟ್‌ಗಳ ಮೂಲಕವೂ ಖರೀದಿ ಮಾಡಬಹುದಾಗಿದೆ.