Home Technology BSNL Cheapest Plan : ಕೇವಲ 100 ರೂ.ರೀಚಾರ್ಜ್ ಮಾಡಿ ಸಾಕು, ವರ್ಷವಿಡೀ ಡೇಟಾ, ಅನ್ಲಿಮಿಟೆಡ್...

BSNL Cheapest Plan : ಕೇವಲ 100 ರೂ.ರೀಚಾರ್ಜ್ ಮಾಡಿ ಸಾಕು, ವರ್ಷವಿಡೀ ಡೇಟಾ, ಅನ್ಲಿಮಿಟೆಡ್ ಕರೆ ನಿಮಗಾಗಿ!

Hindu neighbor gifts plot of land

Hindu neighbour gifts land to Muslim journalist

ಹಲವಾರು ವರ್ಷಗಳಿಂದ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಆಗಿದೆ. ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಆಫರ್ಸ್​ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಸದ್ಯ ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್​​ಟೆಲ್​, ವೊಡಫೋನ್ ಐಡಿಯಾ ಈ ರೀತಿಯ ಹಲವಾರು ಖಾಸಗಿ ಕಂಪನಿಗಳಿವೆ. ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್​​ಎನ್​ಎಲ್​ ಕಂಪನಿ ಆಗಿದೆ. ಸದ್ಯ ಬಿಎಸ್​ಎನ್​ಎಲ್​ ಇದೀಗ ತನ್ನ ಗ್ರಾಹಕರಿಗಾಗಿ ಭಾರೀ ಅಗ್ಗದ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.

ಹೌದು ನೀವು ಕೇವಲ 100 ರೂಪಾಯಿ ವೆಚ್ಚ ಮಾಡುವ ಮೂಲಕ ಡೇಟಾ, ಅನ್ಲಿಮಿಟೆಡ್​ ಕಾಲ್​ ಸೌಲಭ್ಯವನ್ನು ಪಡೆಯಬಹುದು. ಸದ್ಯ ಇದು 100 ರೂಪಾಯಿಗಳ ಕಡಿಮೆ ಬೆಲೆಯ ಯೋಜನೆಯಾಗಿದ್ದು, ಇದರಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

BSNL ನ ರೂ. 1,198 ರೀಚಾರ್ಜ್ ಯೋಜನೆ :
ಮುಖ್ಯವಾಗಿ ಬಿಎಸ್​ಎನ್​ಎಲ್​ ಗ್ರಾಹಕರು ಒಂದು ಸಲಿ ರೀಚಾರ್ಜ್ ಮಾಡಿದರೆ ಇಡೀ ವರ್ಷ ರೀಚಾರ್ಜ್ ಮಾಡಬೇಕಾಗಿಲ್ಲ. ಈ ಬೆಲೆ ಒಂದು ವರ್ಷಕ್ಕೆ ಚಾಲ್ತಿಯಲ್ಲಿದ್ದರೂ ಮಾಸಿಕ ಬೆಲೆಯನ್ನು ಸೇರಿಸಿದರೆ ತಿಂಗಳಿಗೆ 100 ರೂಪಾಯಿಯಷ್ಟು ವೆಚ್ಚವಾಗುತ್ತದೆ.

ಈ ಯೋಜನೆಯ ಪ್ರಯೋಜನಗಳು :
• BSNL ನ ರೂ. 1,198 ರೀಚಾರ್ಜ್ ಯೋಜನೆ, ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡುತ್ತದೆ. ಅಂದರೆ ನೀವು ಒಂದು ವರ್ಷದವರೆಗೆ ಬೇರೆ ಯಾವುದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ.
• ಈ ಯೋಜನೆಯಲ್ಲಿ, ನಿಮಗೆ ಪ್ರತಿ ತಿಂಗಳು 3ಜಿಬಿ ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಡೇಟಾ ಮಿತಿ ಮುಗಿದ ನಂತರ, ನಿಮ್ಮ ಇಂಟರ್ನೆಟ್ ವೇಗವನ್ನು 80 ಕೆಬಿಪಿಎಸ್‌ಗೆ ಇಳಿಕೆಯಾಗುತ್ತದೆ.
• ಇನ್ನು ಈ ಯೋಜನೆಯಲ್ಲಿ ಪ್ರತಿ ತಿಂಗಳು 30 ಉಚಿತ ಎಸ್​ಎಮ್​ಎಸ್​ ಮಾಡಬಹುದಾಗಿದೆ.
• ಈ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು 300 ನಿಮಿಷಗಳ ಉಚಿತ ಕಾಲ್​ ಸಹ ಮಾಡಬಹುದಾಗಿದೆ.

ಮಾಸಿಕ ರೀಚಾರ್ಜ್ ಅನ್ನು ತಪ್ಪಿಸಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ನೀವು ಸಿಮ್ ಅನ್ನು ಸಕ್ರಿಯವಾಗಿ ಇರಿಸಲು ಬಯಸಿದಲ್ಲಿ ಬಿಎಸ್​ಎನ್​ಎಲ್​ನ ಕಡೆಯಿಂದ ಗ್ರಾಹಕರಿಗೆ ಒಳ್ಳೆಯ ರಿಚಾರ್ಜ್ ಆಫರ್ ನೀಡಲಾಗಿದೆ. ಈ ಮೇಲಿನ ರಿಚಾರ್ಜ್ ಮಾಡಿದಲ್ಲಿ ನಿಮಗೆ ಒಂದು ವರ್ಷ ರಿಚಾರ್ಜ್ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರಲ್ಲ.