Home Technology 2024 Hero Karizma : ಅತ್ಯಧಿಕ ಪವರ್, 210cc ಎಂಜಿನ್‌ ನೊಂದಿಗೆ Karizma ಪುನರಾಗಮನ !!

2024 Hero Karizma : ಅತ್ಯಧಿಕ ಪವರ್, 210cc ಎಂಜಿನ್‌ ನೊಂದಿಗೆ Karizma ಪುನರಾಗಮನ !!

Hindu neighbor gifts plot of land

Hindu neighbour gifts land to Muslim journalist

2024 Hero Karizma 210cc: ಬೈಕ್ (bike) ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜ್. ಸ್ಪೋರ್ಟ್ ಬೈಕ್ ತಗೊಂಡು ರಸ್ತೆಯಲ್ಲಿ ಹಾರುವ ಸ್ಪೀಡಿನಲ್ಲಿ ಓಡಿಸಬೇಕು ಎನ್ನುವುದು ಎಲ್ಲಾ ಯುವಕರ ಬಯಕೆ. ಮಾರುಕಟ್ಟೆಗೂ ಹಲವು ನೂತನ ಬೈಕ್ ಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ 2024 Hero Karizma 210cc ಹೊಸ ಅವತಾರದಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ. ಹೌದು, 90ರ ದಶಕದ ಯುವಕರ ಕನಸಿನ ಬೈಕ್ Hero Karizma ಮತ್ತೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಈಗಿನ ಮೋಟಾರು ವಾಹನ ಮಾನದಂಡಗಳಿಗೆ ಅನುಗುಣವಾಗಿ ಹೊಸ ಲಿಕ್ವಿಡ್ ಕೂಲ್ಡ್ 210cc ಎಂಜಿನ್‌ನೊಂದಿಗೆ ಹೀರೋ ಕರಿಜ್ಮಾ ಪುನರಾಗಮನ ಆಗುತ್ತಿದೆ.

2024 ಹೀರೋ ಕರಿಜ್ಮಾ 210cc: ಗ್ರಾಹಕರನ್ನು ಸೆಳೆಯಲು ಕರಿಜ್ಮಾಗಾಗಿ ಬಾಲಿವುಡ್ (Bollywood) ಸ್ಟಾರ್ ಹೃತಿಕ್ ರೋಷನ್ (Hrithik Roshan) ಕರಿಜ್ಮಾ ZMR ನಲ್ಲಿ ಸ್ಟಂಟ್‌ಗಳನ್ನು ಮಾಡಿದ್ದು, ಈ ಮೂಲಕ ಇದರ ಜಾಹಿರಾತುಗಳನ್ನು ಬಿಡುಗಡೆ ಮಾಡಲಾಗಿತ್ತು. ಮುಂಬರುವ 2024 ಹೀರೋ ಕರಿಜ್ಮಾ ಹಳೆಯ ಕರಿಜ್ಮಾ ಸರಣಿಯ ಸ್ಫೂರ್ತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಹಿಂದೆಂದಿಗಿಂತಲೂ ವೇಗದ ಮೋಟಾರ್‌ ಸೈಕಲ್ ಆಗಿರಲಿದೆ.

ಕರಿಜ್ಮಾ 210cc ಲಿಕ್ವಿಡ್-ಕೂಲ್ಡ್ ಎಂಜಿನ್, ಹೊಸ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ. ಹಾಗೆಯೇ 25 bhp ಪವರ್ ಮತ್ತು 30 Nm ಟಾರ್ಕ್ ನೀಡುವ ಸಾಧ್ಯತೆಯಿದೆ. ಇದು ಸಂಪೂರ್ಣ ಫೇರ್ಡ್ ಮೋಟಾರ್‌ಸೈಕಲ್ ಆಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ ಎರಡೂ ಡಿಸ್ಕ್ ಬ್ರೇಕ್‌ಗಳು ಇರಲಿದೆ. ಉಳಿದಂತೆ ಎಲ್‌ಇಡಿ ಲೈಟಿಂಗ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ನೊಂದಿಗೆ ಬ್ಲೂಟೂತ್ ಸಂಪರ್ಕ, ಎಂಜಿನ್ ಕಟ್ ಆಫ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಸೆನ್ಸಾರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. 2024 ಹೀರೋ ಕರಿಜ್ಮಾ 210cc ಬೆಲೆಯು 1.5 ಲಕ್ಷ ರೂ. ಇರಬಹುದು ಎನ್ನಲಾಗಿದೆ.