Home Latest Sports News Karnataka vinesh phogat: ಭಾರತೀಯರ ಪದಕದ ಕನಸು ಭಗ್ನ : ಫೈನಲ್‌ ಪಂದ್ಯದಿಂದ ಅನರ್ಹಗೊಂಡ ವಿನೇಶ್ ಫೋಗಟ್

vinesh phogat: ಭಾರತೀಯರ ಪದಕದ ಕನಸು ಭಗ್ನ : ಫೈನಲ್‌ ಪಂದ್ಯದಿಂದ ಅನರ್ಹಗೊಂಡ ವಿನೇಶ್ ಫೋಗಟ್

vinesh phogat

Hindu neighbor gifts plot of land

Hindu neighbour gifts land to Muslim journalist

vinesh phogat: ಭಾರತದ ಕ್ರೀಡಾ ಅಭಿಮಾನಿಗಳು ಇಂದಿನ ಕುಸ್ತಿ ಫೈನಲ್‌ ಪಂದ್ಯಕ್ಕೆ ಆಸೆಗಣ್ಣಿನಿಂದ ಕಾಯುತ್ತಿದ್ದರು. ಕುಸ್ತಿಯಲ್ಲಿ ವಿನೇಶ್‌ ಪೋಗಟ ಒಂದು ಪದಕ ಬೇಟೆಯಾಡುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ ಇದೀಗ ಬಂದ ಮಾಹಿತಿ ಭಾರತಕ್ಕೆ ದೊಡ್ಡ್‌ ಶಾಕ್‌ ನೀಡಿದೆ. ವಿನೇಶ್ ಫೋಗಟ್ (Vinesh Phogat) ಕುಸ್ತಿ ಫೈನಲ್‌ ಪಂದ್ಯದಿಂದ ಅನರ್ಹಗೊಂಡಿದ್ದಾರೆ.

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೇಶ್‌ ಫೋಗಟ್‌ ಫೈನಲ್‌ ತಲುಪಿದ್ದರು. ಆದರೆ ವಿನೇಶ್‌ ಅವರ ತೂಕ ಜಾಸ್ತಿಯಾದ ಹಿನ್ನೆಲೆಯಲ್ಲಿ ಅವರು ಅನರ್ಹರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿವೆ. ವಿನೇಶ್‌ ಫೋಗಟ್‌ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅಂದ್ರೆ 50 ಕೇ.ಜಿಗಿಂತ ಗರಿಷ್ಟ 100 ಗ್ರಾಂ ಅಧಿಕ ತೂಕ ಹೊಂದಲು ಅವಕಾಶ ಇದೆ. ಆದರೆ ಇಂದು ಅವರ ದೇಹದ ತೂಕ 150 ಗ್ರಾಂ ಜಾಸ್ತಿಯಾಗಿದೆ. ಈ ಕಾರಣ ಅವರನ್ನು ಫೈನಲ್‌ನಿಂದ ಅನರ್ಹ ಮಾಡಲಾಗಿದೆ ಎಂದು ವರದಿಯಾಗಿದೆ.