Home latest ಏಷ್ಯಾ ಕಪ್‌ ಟೂರ್ನಿಯಿಂದ ಹೊರ ನಡೆದ ಆಲ್‌ರೌಂಡರ್‌ ಜಡೇಜಾ

ಏಷ್ಯಾ ಕಪ್‌ ಟೂರ್ನಿಯಿಂದ ಹೊರ ನಡೆದ ಆಲ್‌ರೌಂಡರ್‌ ಜಡೇಜಾ

Hindu neighbor gifts plot of land

Hindu neighbour gifts land to Muslim journalist

ಟೀಂ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವ
೨೦೨೨ರ ಏಷ್ಯಾ ಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ.

ರವೀಂದ್ರ ಜಡೇಜಾ ಅವರ ಬದಲಿಗೆ ಅಕ್ಷರ್ ಪಟೇಲ್ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಆಲ್‌ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿಗೆ ಗಾಯವಾಗಿದ್ದು, ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್‌ ಬೈ ಪ್ಲೇಯರ್ ಎಂದು ಹೆಸರಿಸಿದ್ದ ಬಿಸಿಸಿಐ ಇದೀಗ ಜಡೇಜಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಭಾರತ-ಪಾಕಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಪಾಕ್ ವಿರುದ್ಧ 29 ಎಸೆತಗಳಲ್ಲಿ 35 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದರು. ಹಾಂಕಾಂಗ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಬ್ಯಾಟಿಂಗ್ ಅವಕಾಶದಿಂದ ವಂಚಿತರಾದರು.