Home Latest Sports News Karnataka Paris Olympics: ಭಾರತಕ್ಕೆ ಮತ್ತೆರಡು ಪದಕದ ಭರವಸೆ – ನೀರಜ್ ಚೋಪ್ರಾ, ವಿನೇಶ್ ಪೋಗಟ್ ಫೈನಲ್...

Paris Olympics: ಭಾರತಕ್ಕೆ ಮತ್ತೆರಡು ಪದಕದ ಭರವಸೆ – ನೀರಜ್ ಚೋಪ್ರಾ, ವಿನೇಶ್ ಪೋಗಟ್ ಫೈನಲ್ ಗೆ ಲಗ್ಗೆ !!

Paris Olympics

Hindu neighbor gifts plot of land

Hindu neighbour gifts land to Muslim journalist

Paris Olympics: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕದ ಆಸೆ ಜೀವಂತವಾಗಿದೆ. ಜಾವಲಿನ್ ಎಸೆತದಲ್ಲಿ ನೀರಜ್‌ ಚೋಪ್ರಾ ಅವರು ಇಂದು ಫೈನಲ್ ಪ್ರವೇಶಿಸಿದ್ದಾರೆ. ಅತ್ತ ಕಡೆ ಭಾರತದ ತಾರಾ ಕುಸ್ತಿಪಟು ವಿನೇಶ್​ ಪೋಗಟ್​ ಅವರು ಪ್ಯಾರಿಸ್​ ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್​ ತಲುಪಿದ್ದಾರೆ.

ನೀರಜ್ ಚೋಪ್ರಾ:
ಜಾವಲಿನ್ ಎಸೆತದಲ್ಲಿ ನೀರಜ್‌ ಚೋಪ್ರಾ ಅವರು ಇಂದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಆಟ ಮುಂದುವರಿಸಿದ್ದಾರೆ. ಫೈನಲ್‌ ಪ್ರವೇಹಿಸುವ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು 89 ಮೀಟರ್‌ವರೆಗೂ ಜಾವಲಿನ್ ಎಸೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ(Neeraj chopra) ಅವರ ಸಾಧನೆಗೆ ಕೋಟ್ಯಾಂತರ ಭಾರತೀಯರು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ವಿನೇಶ್ ಪೋಗಟ್:
ಹರಿಯಾಣದ(Hariyana) ಕುಸ್ತಿಪಟು ವಿನೇಶ್ ಫೋಗಟ್(Vinesh Pogath) ಅವರು ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್(Paris Olympic) ನ 50 ಕೆಜಿ ವಿಭಾಗದಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ ಭಾರತದ ವಿನೇಶಾ 5-0 ಅಂತರದಲ್ಲಿ ಜಯಗಳಿಸಿದರು. ಈ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಮತ್ತು ಎರಡನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುನ್ನಾ ನಡೆದ 50 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ಚಿನ್ನದ ಪದಕ ವಿಜೇತೆ ಜಪಾನಿನ ಯುಯಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ವಿನೇಶ್ ಕೊನೆಯ 5 ಸೆಕೆಂಡುಗಳವರೆಗೆ 0-2 ರಿಂದ ಹಿಂದುಳಿದಿದ್ದರು. ಆದರೆ ಕೊನೆಯಲ್ಲಿ ಮೂರು ಅಂಕಗಳನ್ನು ಪಡೆಯುವ ಮೂಲಕ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನ್ನು 3-2 ಅಂತರದಿಂದ ಸೋಲಿಸಿದರು.