Home Latest Sports News Karnataka Jay Shah: ICC ಯ ನೂತನ ಅಧ್ಯಕ್ಷರಾದ ಜಯ್ ಶಾಗೆ ಸಿಗೋ ಸಂಬಳವೆಷ್ಟು? ಏನೇನು ಸೌಲಭ್ಯ...

Jay Shah: ICC ಯ ನೂತನ ಅಧ್ಯಕ್ಷರಾದ ಜಯ್ ಶಾಗೆ ಸಿಗೋ ಸಂಬಳವೆಷ್ಟು? ಏನೇನು ಸೌಲಭ್ಯ ಸಿಗುತ್ತೆ?

Jay Shah

Hindu neighbor gifts plot of land

Hindu neighbour gifts land to Muslim journalist

Jay Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, BCCI ಕಾರ್ಯದರ್ಶಿ, ಜಯ್ ಶಾ ಇವರು ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ಗೆ (ICC) ಜಯ್​​ ಶಾ(Jay Shah) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ 5 ವರ್ಷ ವರ್ಷಕ್ಕೆ ಐಸಿಸಿ ಮುಖ್ಯಸ್ಥರಾಗಿರುವ 5ನೇ ಭಾರತೀಯ ಮತ್ತು ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಡಿಸೆಂಬರ್​​ನಲ್ಲಿ ಜಯ್​​ ಶಾ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೀಗ ಅವರ ಸಂಬಳ ಎಷ್ಟಿರಬಹುದು ಎಂಬ ಕುತೂಹಲತೆ ಎಲ್ಲರಲ್ಲಿ ಮನೆ ಮಾಡಿದೆ? ಅನೇಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಮಾಡುತ್ತಿದ್ದಾರೆ. ಹಾಗಿದ್ರೆ ಇನ್ಮುಂದೆ ICC ಯಲ್ಲಿ ಜಯ್ ಶಾಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸವಲತ್ತು ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ.

ಮಾಹಿತಿಗಳ ಪ್ರಕಾರ ಐಸಿಸಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಯಾವುದೇ ನಿರ್ದಿಷ್ಟ ವೇತನವನ್ನು ನಿಗಧಿ ಮಾಡುವುದಿಲ್ಲ. ಜವಾಬ್ದಾರಿ ಮತ್ತು ಕೆಲಸದ ಆಧಾರದ ಮೇಲೆ ಪಾವತಿ ಮಾಡುತ್ತದೆ ಎನ್ನಲಾಗಿದೆ. ಇನ್ನು ಐಸಿಸಿ ಸಭೆ, ಹೋಟೆಲ್ ವಸತಿ, ಪ್ರಯಾಣದ ಟಿಕೆಟ್ ಇವುಗಳ ಕುರಿತಾಗಿ ಐಸಿಸಿ ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಜೈ ಶಾ ಬಿಸಿಸಿಐ ನಲ್ಲಿದ್ದಾಗ ದೇಶದಿಂದ ಅಂತರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಲು 82 ಸಾವಿರ, ಭಾರತದಲ್ಲಿಯೇ ನಡೆಯುವ ಸಭೆಗಳಲ್ಲಿ ಭಾಗವಹಿಸುವುದಕ್ಕೆ 40 ಸಾವಿರ, ಸಭೆಗಳನ್ನು ಹೊರತಾಗಿ ದೇಶದ ಒಳಗೆ ಪ್ರವೇಶಿಸಲು 30 ಸಾವಿರ ರೂಪಾಯಿ ನೀಡುತ್ತಾ ಇತ್ತು. ಇದನ್ನು ಹೊರತುಪಡಿಸಿ ಹೈಫೈ ಸೌಲಭ್ಯಗಳನ್ನು ನೀಡುತ್ತಾ ಇತ್ತು. ಇದೇ ರೀತಿ ಜಯ್ ಶಾಗೂ ಸಿಗಬಹುದು.

ಇನ್ನು ವಿಶೇಷ ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯ್ ಶಾ, ಭತ್ಯೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಳವನ್ನು ಬಿಸಿಸಿಐನಿಂದ ಪಡೆದುಕೊಂಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.