Home Latest Sports News Karnataka IPL: ಕೋಟ್ಯಂತರ ರೂಪಾಯಿಗೆ ಸೇಲ್ ಆಗೋ ಆಟಗಾರರ ಕೈಗೆ ಹಣ ಹೇಗೆ ಸಿಗುತ್ತೆ? ಇಲ್ಲಿದೆ ನೋಡಿ...

IPL: ಕೋಟ್ಯಂತರ ರೂಪಾಯಿಗೆ ಸೇಲ್ ಆಗೋ ಆಟಗಾರರ ಕೈಗೆ ಹಣ ಹೇಗೆ ಸಿಗುತ್ತೆ? ಇಲ್ಲಿದೆ ನೋಡಿ IPL ಗಿಮಿಕ್

Hindu neighbor gifts plot of land

Hindu neighbour gifts land to Muslim journalist

IPL: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರತಿ ವರ್ಷವೂ ನೂರಾರು ಕ್ರಿಕೆಟ್ ಆಟಗಾರರನ್ನು ತಂಡದ ಮಾಲೀಕರು ಕೋಟ್ಯಂತರ ರೂಪಾಯಿಗಳನ್ನು ಸುರಿದು ಪರ್ಚೇಸ್ ಮಾಡುತ್ತಾರೆ. ಕೆಲವು ಸ್ಟಾರ್ ಆಟಗಾರರಿಗಂತು 20, 30, 40 ಕೋಟಿಯನ್ನು ಸುರಿದು ಕೊಂಡುಕೊಳ್ಳುವುದುಂಟು. ಆದರೆ ಈ ಹಣವೆಲ್ಲ ಆಟಗಾರರ ಕೈಗೆ ಹೇಗೆ ಸೇರುತ್ತದೆ ಎಂಬುದು ಅನೇಕ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ. ಹಾಗಿದ್ರೆ ಈ ಐಪಿಎಲ್ ಗಿಮಿಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.

 ಕೋಟಿ ಕೋಟಿ ಕೊಟ್ಟು ಹರಾಜಿನಲ್ಲಿ ಆಟಗಾರರನ್ನು ಪಡೆಯುವ ಫ್ರಾಂಚೈಸಿಗಳು ಆಟಗಾರರಿಗೆ ಸಂಭಾವನೆಯನ್ನು ಮೂರು ಅಥವಾ ನಾಲ್ಕು ಕಂತುಗಳಲ್ಲಿ ಪಾವತಿಸುತ್ತವೆ. ಹಾಗಿದ್ರೆ ಆ ಕಂತುಗಳು ಯಾವುವು? ಕೋಟ್ಯಾಂತರ ರೂಪಾಯಿ ಆಟಗಾರರ ಕೈಗೆ ಹೇಗೆ ಸೇರುತ್ತದೆ? ಎಂದು ನೋಡೋಣ ಬನ್ನಿ.

ಮೊದಲ ಕಂತು (ಟೂರ್ನಿ ಆರಂಭಕ್ಕೆ ಮುನ್ನ): ಒಟ್ಟು ಸಂಭಾವನೆಯ ಸುಮಾರು 15% ರಿಂದ 25% ಹಣವನ್ನು ಟೂರ್ನಿ ಆರಂಭವಾಗುವ ಕೆಲವು ದಿನಗಳ ಮೊದಲು ನೀಡಲಾಗುತ್ತದೆ.

ಎರಡನೇ ಕಂತು (ಟೂರ್ನಿಯ ಮಧ್ಯಭಾಗದಲ್ಲಿ): ಪಂದ್ಯಾವಳಿ ನಡೆಯುತ್ತಿರುವಾಗ ಸುಮಾರು 40% ರಿಂದ 50% ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಮೂರನೇ ಕಂತು (ಟೂರ್ನಿ ಮುಗಿದ ನಂತರ): ಟೂರ್ನಿ ಯಶಸ್ವಿಯಾಗಿ ಮುಗಿದ ಬಳಿಕ ಬಾಕಿ ಇರುವ 25% ರಿಂದ 30% ಹಣವನ್ನು ಆಟಗಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ತೆರಿಗೆ ಮತ್ತು ಬ್ಯಾಂಕ್ ವರ್ಗಾವಣೆ

ಟಿಡಿಎಸ್ (TDS): ಭಾರತೀಯ ಆಟಗಾರರಿಗೆ ಒಟ್ಟು ಮೊತ್ತದಲ್ಲಿ 10% ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ವಿದೇಶಿ ಆಟಗಾರರಿಗೆ ಇದು ಸುಮಾರು 20% ವರೆಗೆ ಇರುತ್ತದೆ.

ಪಾವತಿ ವಿಧಾನ: ಐಪಿಎಲ್‌ನಲ್ಲಿ ನಗದು ರೂಪದ ಪಾವತಿಗೆ ಅವಕಾಶವಿಲ್ಲ. ಎಲ್ಲಾ ಪಾವತಿಗಳನ್ನು NEFT ಅಥವಾ RTGS ನಂತಹ ಬ್ಯಾಂಕ್ ವರ್ಗಾವಣೆಗಳ ಮೂಲಕವೇ ಮಾಡಲಾಗುತ್ತದೆ. 

ಗಾಯಗೊಂಡರೆ ಹಣ ಸಿಗುತ್ತದೆಯೇ?

ಒಂದು ವೇಳೆ ಆಟಗಾರನು ಟೂರ್ನಿ ಆರಂಭಕ್ಕೂ ಮುನ್ನ ತಂಡದ ಕ್ಯಾಂಪ್‌ಗೆ ವರದಿಯಾಗಿ, ನಂತರ ಗಾಯಗೊಂಡರೆ ಆತನಿಗೆ ಪೂರ್ಣ ಸಂಭಾವನೆ ಸಿಗುತ್ತದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡು ಲಭ್ಯವಿಲ್ಲದಿದ್ದರೆ, ಫ್ರಾಂಚೈಸಿಗಳು ಹಣ ಪಾವತಿಸುವುದಿಲ್ಲ.