Home Social Wife Husband Video : ಬೈಕ್ ರೈಡಿಂಗ್ ಸಮಯದಲ್ಲಿ ಹೆಂಡತಿ ಗಂಡನ ಜೊತೆ ಮಾಡುತ್ತಿದ್ದ ರೀತಿ...

Wife Husband Video : ಬೈಕ್ ರೈಡಿಂಗ್ ಸಮಯದಲ್ಲಿ ಹೆಂಡತಿ ಗಂಡನ ಜೊತೆ ಮಾಡುತ್ತಿದ್ದ ರೀತಿ ನೋಡಿ!

Wife Husband Video

Hindu neighbor gifts plot of land

Hindu neighbour gifts land to Muslim journalist

Wife Husband Video: ಸೋಷಿಯಲ್ ಮೀಡಿಯಾದಲ್ಲಿ (Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವೀಡಿಯೋ(Viral Video) ಎಲ್ಲೆಡೆ ಟ್ರೆಂಡ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡುತ್ತಿದೆ.

ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರು ಮಾಡುವ ಕೆಲ ಪ್ರಕ್ರಿಯೆಗಳು ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ. ಸೀದಾ ಸಾದಾ ರಸ್ತೆಯಲ್ಲಿ ಹೋದರೆ ಏನು ಚೆನ್ನ ಅಲ್ಲವೇ? ಅದಕ್ಕೆ ಕೆಲವರು ರೋಡ್ ಅಲ್ಲಿ ಹೈ ಸ್ಪೀಡ್ ಅಲ್ಲಿ ವಾಹನ ಚಾಲನೆ ಮಾಡುವುದೋ ಇಲ್ಲವೇ ರೋಡ್ ಸ್ಟಂಟ್ ಮಾಡಿದನ್ನೆಲ್ಲ ನೋಡಿರಬಹುದು. ಅಷ್ಟೇ ಏಕೆ ವಾಹನ ಸವಾರರು ಪಬ್ಲಿಕ್ ಪ್ಲೇಸ್ ಅನ್ನೋದನ್ನು ಕೂಡ ಮರೆತು ರೋಮ್ಯಾನ್ಸ್ ಮಾಡಿಕೊಂಡು ಹೋಗೋದು ಕೂಡ ಇದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಏನೀ ಕಹಾನಿ ಅಂತ ಗೊತ್ತಾಗಬೇಕು ಅಂದರೆ, ನೀವು ಈ ಸ್ಟೋರಿ ಕೇಳಲೇಬೇಕು!

ಈ ವಿಡಿಯೋ ನೋಡಿದಾಗ ಮೇಡ್ ಫಾರ್ ಈಚ್ ಅದರ್ ಕಪಲ್( Made For Each Other Couple)ಥರ ಕಾಣುತ್ತೆ!! ಇದು ಸಾಮಾನ್ಯ ವಿಡಿಯೋ ಅಲ್ಲವೇ ಅಲ್ಲ ಕಣ್ರೀ!! ವಾಸ್ತವದಲ್ಲಿ, ಪತಿ ಬೈಕ್ ಓಡಿಸುತ್ತಿದ್ದರೆ, (Wife Husband Viral Video)ಪತ್ನಿ ಪತಿಯ ಹಿಂಬದಿ ಚಲಿಸುತ್ತಿದ್ದ ಬೈಕಿನಲ್ಲಿ ಕುಳಿತಿದ್ದಾರೆ. ಮನೆಯಲ್ಲೇ ಯಾರಾದ್ರೂ ಸಿಗರೇಟ್ ಸೇದುತ್ತಾ ಇದ್ದರೆ, ಹೆಂಡತಿ ಬೈದು ಬುದ್ಧಿ ಹೇಳೋದು ನೋಡಿರುತ್ತಿರಾ ಅಲ್ವಾ? ಆದರೆ, ಇಲ್ಲಿ ಅದಕ್ಕೆ ತದ್ವಿರುದ್ದ ಪ್ರಹಸನ ನಡೆದಿದೆ. ಪತ್ನಿ ಚಲಿಸುತ್ತಿರುವ ಬೈಕ್‌ನಲ್ಲಿ ಪತಿಗೆ ಸಿಗರೇಟು ಸೇದಲು ಹೆಲ್ಪ್ ಮಾಡುತ್ತಾ ಇದ್ದು, ಡ್ರೈವಿಂಗ್ ಜೊತೆಗೆ ಪತಿ ಮಹಾಶಯ ಸಿಗರೇಟಿನ ಹೊಗೆಯನ್ನೂ ಕೂಡ ಎಂಜಾಯ್ ಮಾಡಿಕೊಂಡು ಹೋಗೋದನ್ನು ಕಂಡು ಕೆಲ ಮದುವೆಯಾಗದ ಯುವಕರು ಅಯ್ಯೋ!! ಅಣ್ಣ ಪುಣ್ಯ ಮಾಡಿದ್ದೇ ಇಂಥ ಹೆಂಡತಿ ಪಡಿಯೋಕೆ ಅಂದುಕೊಂಡರೂ ಅಚ್ಚರಿಯಿಲ್ಲ.ಸದ್ಯ,ಈ ಜೋಡಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Wife Husband Video)ಜೋರು ಸದ್ದು ಮಾಡುತ್ತಿದ್ದು, ಈ ವೀಡಿಯೊವನ್ನು ‘sunnobc’ ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಇದನ್ನು ನೋಡಿದ ನೆಟ್ಟಿಗರು ‘ಹೆಂಡತಿ ಇದ್ದರೆ ಈ ರೀತಿ ಇರಬೇಕು ಎಂದುಕೊಳ್ಳುತ್ತಿದ್ದಾರೆ.

ಇನ್ಸ್ತಾಗ್ರಾಮ್ (Instagram) ನಲ್ಲಿ ವೈರಲ್ ಆಗಿರುವ ವೀಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ನಾನು ಕೂಡ ಇದೇ ರೀತಿಯ ಹುಡುಗಿಯ ಹುಡುಕಾಟದಲ್ಲಿದ್ದೇನೆ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಹುಶಃ ಪತ್ನಿ ಪತಿಯ ಜೀವ ವಿಮಾ ಪತ್ರಗಳನ್ನು ನೋಡಿರಬೇಕು. ಹೀಗಾಗಿ, ಹೀಗೆ ನಡೆದುಕೊಳ್ಳುತ್ತಿರಬೇಕು ಎಂದು ಜೋಡಿಯ ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. ಏನೇ ಹೇಳಿ!! ಈ ವೀಡಿಯೋ ಜೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಕ್ಷಾಂತರ ಮಂದಿ ಲೈಕ್ಸ್ (Like)ಮಾಡಿದ್ದು, ಸಾವಿರಾರು ಬಾರಿ ಶೇರ್ ಕೂಡ ಆಗಿಬಿಟ್ಟಿದೆ.

https://www.instagram.com/p/CqTK5lToCac/?utm_source=ig_web_copy_link

ಇದನ್ನೂ ಓದಿ: Relationship: ಲೈಂಗಿಕತೆ ಸಮಯದಲ್ಲಿ ಪುರುಷರು ಮಹಿಳೆಯರ ಈ ನಾಲ್ಕು ಅಂಶಗಳನ್ನು ಸದಾ ಗಮನಿಸುತ್ತಾರೆ!